ಕಾಸರಗೋಡು-ವಿದ್ಯಾನಗರ-ಮಾನ್ಯ- ನೀರ್ಚಾಲು -ಮುಂಡ್ಯ ತಡ್ಕ ಮಾರ್ಗದಲ್ಲಿ ಸುಮಾರು ಎಂಟು ಬಸ್ಸುಗಳು ಸಂಚಾರ ನಡೆಸುತ್ತಿದೆ. ಮಾನ್ಯ ಸಮೀಪ ದೇವರಕೆರೆಯಿಂದ ನೀರ್ಚಾಲು ತನಕ ರಸ್ತೆ ದುರಸ್ತಿಯ ಕಾರಣ ಕಳೆದ ಎರಡು ದಿನಗಳಿಂದ ಈ ರೂಟಿನಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು ಕೊಲ್ಲಂಗಾನದಿಂದ ಕೊರತ್ತಿಗುಳಿ ಕಡಂಬಳ ದಾರಿಯಾಗಿ ನೀರ್ಚಾಲಿಗೆ ಸಂಚರಿಸುತ್ತಿದೆ. ಇದರಿಂದಾಗಿ ಮಾನ್ಯ ಆಸುಪಾಸಿನ ಜನತೆಗೆ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ. ಆದುದರಿಂದ ಈ ರೂಟಿನ ಬಸ್ಸುಗಳು ಮಾನ್ಯ ಪೇಟೆಯನ್ನು ಸಂಪರ್ಕಿಸಿ ಕೊರತ್ತುಗುಳಿ ಕಡಂಬಳ ದಾರಿಯಾಗಿ ನೀರ್ಚಾಲಿಗೆ ಸಂಚರಿಸಬೇಕೆಂದು ಮನವಿಯನ್ನು ಕಾಸರಗೋಡು ಆರ್ಟಿಓ ಹಾಗೂ ಜಿಲ್ಲಾ ಬಸ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷರಿಗೆ ಸಲ್ಲಿಸಲಾಯಿತು. ನಿಯೋಗದಲ್ಲಿ ಬದಿಯಡ್ಕ ಗ್ರಾಮ ಪಂಚಾಯತ್ ಜನಪ್ರತಿನಿಧಿ ಶ್ಯಾಮಪ್ರಸಾದ್ ಮಾನ್ಯ ಸಾಮಾಜಿಕ ನೇತಾರರಾದ ಮಹೇಶ್ ವಳಕುಂಜ, ಖಾದರ್ ಮಾನ್ಯ, ರಾಧಾಕೃಷ್ಣ ರೈ ಕಾರ್ಮಾರು , ಸುಂದರ ಶೆಟ್ಟಿ ಕೊಲ್ಲಂಗಾನ ಮುಂತಾದವರು ಉಪಸ್ಥಿತರಿದ್ದರು.
ರಸ್ತೆ ದುರಸ್ತಿಯ ಹಿನ್ನೆಲೆಯಲ್ಲಿ ಬಸ್ಸು ಸಂಚಾರ ಮೊಟಕು, ಸಾರ್ವಜನಿಕರಿಗೆ ಸಂಕಷ್ಟ ಬದಲಿ ರಸ್ತೆಯಲ್ಲಿ ಸಂಚಾರ ನಡೆಸಲು ಮನವಿ
November 02, 2022
0

Tags