ಕಲ್ಲರಕೋಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರೋತ್ಸವ ದಿನಾಚರಣೆ | ಮಾದರಿಯಾದ ಆನ್ಲೈನ್ ವ್ಯವಸ್ಥೆ
August 15, 2021
0
ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಕಲ್ಲರಕೋಡಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಕೋವಿಡ್ ಮಾನದಂಡಗಳನ್ನು ಅನುಸರಿಸಿಕೊಂಡು ಆಚರಿಸಲಾಯಿತು. ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಝಾಕ್ ಧ್ವಜಾರೋಹಣ ನೆರವೇರಿಸಿದರು. ನರಿಂಗಾನ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ನವಾಝ್ ಎಂ. ಬಿ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ಬಗ್ಗೆ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಪಂಚಾಯತ್ ಸದಸ್ಯರಾದ ಸಾಬಿರ, ಶಾಂತಿ ಡಿ ಸೋಜಾ, ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷರು, ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ವಿಧ್ಯಾಭಿಮಾನಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕೋವಿಡ್ ಕಾರಣದಿಂದ ಶಾಲೆ ಆಗಮಿಸಲು ಅವಕಾಶವಿಲ್ಲದ ಕಾರಣ ಆನ್ಲೈನ್(ಗೂಗಲ್ ಮೀಟ್) ಮುಖಾಂತರ ಈ ಕಾರ್ಯಕ್ರಮದ ವೀಕ್ಷಣೆಗೆ ದೈಹಿಕ ಶಿಕ್ಷಕಿಯಾದ ಮಮತಾ ಎಂ ಟೀಚರ್ ಇವರ ನೇತೃತ್ವದಲ್ಲಿ ವ್ಯವಸ್ಥೆ ಮಾಡಿ ಮಾದರಿಯಾದರು. ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯಿನಿ ಮೀರಾ. ಯಂ. ವಿ ಸ್ವಾಗತಿಸಿ, ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಸೀಮಾ ಮರಿಯ ಡಿ ಸೋಜಾ ವಂದಿಸಿದರು. ಹಿರಿಯ ಅಧ್ಯಾಪಕರಾದ ಬಿ ಕೆ ವಸಂತ ರೈ ನಿರೂಪಿಸಿದರು.
Tags
