ಮಂಜೇಶ್ವರ: ಧಾರ್ಮಿಕ ಕಾರ್ಯಗಳಿಂದ ಸಂಸ್ಕಾರದ ಅರಿವಿನೊಂದಿಗೆ ಬದುಕಿನಲ್ಲಿ ಉಜ್ವಲತೆ ಪಡೆಯಬಹುದು. ಪ್ರತಿಯೊಬರಲ್ಲಿಯೂ ಸೇವಾ ಮನೋಭಾವನೆ ಬೆಳೆಯಬೇಕು ಎಂದು ಶ್ರೀ ಧಾಮ ಮಾಣಿಲ ದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.
ಅವರು ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದಂಗವಾಗಿ ಇಂದು ರಾತ್ರಿ "ಶ್ರೀ ಸುದರ್ಶನ ವೇದಿಕೆ" ಯಲ್ಲಿ ನಡೆದ ಮೊದಲ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನ ದೀಪ ಬೆಳಗಿಸಿ, ಉದ್ಘಾಟಿಸಿ, ಆಶೀರ್ವಚನವಿತ್ತರು. ಆಧ್ಯಾತ್ಮಿಕ ತಳಹದಿಯಿಂದಲೇ ಭಾರತ ಸದೃಢ, ಸಶಕ್ತ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಅವರು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಡಾ. ಶ್ರೀಧರ್ ಭಟ್ ಉಪ್ಪಳ ವಹಿಸಿದ್ದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ: ಮುಖೇಶ್, ಧಾರ್ಮಿಕ ಮುಂದಾಳು ವಸಂತ್ ಪೈ ಬದಿಯಡ್ಕ, ಕ್ಯಾಮ್ಕೋ ಮಂಗಳೂರು ನಿರ್ದೇಶಕರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಶ್ರೀ ಕೀರ್ತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಶ್ವನಾಥ ಸಿ, ಹಿರಿಯ ಸಾಹಿತಿ, ವೈದ್ಯರಾದ ಡಾ. ರಮಾನಂದ ಬನಾರಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭಾಶಂಸನೆಗೈದರು.
ಈ ವೇಳೆ ಕ್ಷೇತ್ರದ ಬಗ್ಗೆ ಇರುವ "ಕಡಂಬಾರು ದ ಬೊಳ್ಳಿ ಬೊಲ್ಪು" ಎಂಬ ತುಳು ಅಲ್ವಮ್ ಸಾಂಗ್ ನ ಬಿಡುಗಡೆಯನ್ನ ಪೂಜ್ಯ ಸ್ವಾಮಿಜಿಯವರು ಗಣ್ಯರ ಸಮ್ಮುಖದಲ್ಲಿ ನೆರವೇರಿಸಿದರು. ಈ ಗೀತೆಯ ಸಾಹಿತಿ, ನಿರ್ಮಾಣಕರ್ತೃರಾದ ರಾಕೇಶ್ ಕುಲಾಲ್ ಕಡಂಬಾರು ಹಾಗೂ ಗಾಯಕಿ ಶಮಿತಾ ಆಚಾರ್ಯ ಕಡಂಬಾರು, ಹಿನ್ನೆಲೆ ಗಾಯಕಿ ಮಿಥಿಲ ಇವರನ್ನ ಸ್ವಾಮಿಜಿಯವರು ಶಾಲು ಹೊದಿಸಿ ಸನ್ಮಾನಿಸಿದರು.
ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಜಯರಾಮ ಶೆಟ್ಟಿ ಕಡಂಬಾರು, ಕ್ಷೇತ್ರದ ಮುಖ್ಯ ಪಾಕಶಾಸ್ತ್ರಜ್ಞ ಕೃಷ್ಣ ಹೊಳ್ಳ, ಸೇವಾ ಸಮಿತಿ ಅಧ್ಯಕ್ಷರಾದ ಚಂದಪ್ಪ ಶೆಟ್ಟಿ ಕಜಕೋಡಿ, ಉದಯ ಆಚಾರ್ಯ ನೀಲೇಶ್ವರ ಗೌರವ ಉಪಸ್ಥಿತರಿದ್ದರು.
ಕು. ಶಮಿತಾ ಆಚಾರ್ಯ ಕಡಂಬಾರು ಪ್ರಾರ್ಥನೆ ಹಾಡಿ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಾಮಚಂದ್ರ ರಾವ್ ಕಡಂಬಾರು ಸ್ವಾಗತಿಸಿ, ವೇದಿಕೆ ಸಮಿತಿ ಪದಾಧಿಕಾರಿಗಳಾದ ಸಂಕಬೈಲು ಸತೀಶ್ ಅಡಪ್ಪ, ಸದಾನಂದ ಶೆಟ್ಟಿ ತಲೆಕಳ ನಿರೂಪಿಸಿ, ಹರೀಶ್ ಶೆಟ್ಟಿ ಧರ್ಮೇಮಾರ್ ವಂದಿಸಿದರು.
ಬೆಳಗ್ಗೆ ಬ್ರಹ್ಮಶ್ರೀ ತಂತ್ರಿಗಳಿಗೆ ಮತ್ತು ವೈದಿಕರಿಗೆ ಸ್ವಾಗತ, ವಿವಿಧ ವೈದಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ನಡೆಯಿತು.
ಅಪರಾಹ್ನ ಕ್ಷೇತ್ರಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಆಗಮಿಸಿದರು. ಇವರನ್ನ ಕ್ಷೇತ್ರದ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಬಳಿಕ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಹೊರೆಕಾಣಿಕೆ ಮೆರವಣಿಗೆಗೆ ಸ್ವಾಮೀಜಿಯವರು ದೀಪ ಬೆಳಗಿಸಿ, ಶುಭ ಹಾರೈಸಿದರು. ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಅಧ್ಯಕ್ಷರಾದ ಪದ್ಮನಾಭ ಕಡಪ್ಪರರವರು ತೆಂಗಿನಕಾಯಿ ಒಡೆಯುವ ಮೂಲಕ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ನಾಟ್ಯ ನಿಲಯಂ ಮಂಜೇಶ್ವರ ಇವರಿಂದ "ನೃತ್ಯ ರಂಜನಂ" ನಡೆಯಿತು.
✍️ ವರದಿ: ಶ್ರೀ ರತನ್ ಕುಮಾರ್ ಹೊಸಂಗಡಿ.
📸 ಚಿತ್ರಗಳು: ಶ್ರೀ ದೀಪಕ್ ರಾಜ್ ಉಪ್ಪಳ.
ಪತ್ರಿಕಾ/ ದೃಶ್ಯ ಮಾಧ್ಯಮ ಸಮಿತಿ ಬ್ರಹ್ಮಕಲಶೋತ್ಸವ.

