ಸ್ವಾತಂತ್ರ್ಯದಿಂದಲೇ ಅಭಿವೃದ್ಧಿ : ಹರ್ಷಾದ್ ವರ್ಕಾಡಿ
ಮಂಜೇಶ್ವರ: ಎಲ್ಲಿಯವರೆಗೆ ಪ್ರಜೆಗಳು ಸ್ವಾತಂತ್ರ್ಯರಾಗಿರುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ, ಪ್ರಜೆಗಳ ಅಭಿವೃದ್ಧಿ, ನಾಡಿನ ಅಭಿವೃದ್ಧಿ, ಒಂದು ಕುಟುಂಬದ ಅಭಿವೃದ್ಧಿ ಸಾಧ್ಯ, ಇದಕ್ಕೆ ಭಾರತದೇಶ ಸಾಕ್ಷಿಯಾಗಿದೆ, ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ನಂತರ ಭಾರತ ದೇಶವು ಹಲವು ಹೊಸತುಗಳನ್ನು ಕಂಡಿದೆ. ಹಲವು ಸಾಧನೆಗಳಿಗೆ ಸಾಕ್ಷಿಯಾಗಿದೆ. ಈ ಸಾಧನೆ, ಅಭಿವೃದ್ಧಿಗಳ ಸಂಖ್ಯೆ ಸ್ವಾತಂತ್ರ್ಯ ಭಾರತದಲ್ಲಿ ಹೆಚ್ಚುತ್ತಲೇ ಇರುತ್ತದೆ ಹೊರತು, ಎಂದಿಗೂ ಇದಕ್ಕೆ ಅಂತ್ಯ ಎನ್ನುವುದಿಲ್ಲ ಎಂದು ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಹೇಳಿದ್ದಾರೆ. ಅವರು ಮಂಜೇಶ್ವರ ಪ್ರೆಸ್ ಕ್ಲಬ್ ವತಿಯಿಂದ ಜರುಗಿದ 75ನೇ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಅಬ್ದುಲ್ ರಹಿಮಾನ್ ಉದ್ಯಾವರ ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಪತ್ರಕರ್ತರಾದ ರತನ್ ಕುಮಾರ್ ಹೊಸಂಗಡಿ , ರವಿ ಪ್ರತಾಪನಗರ, ಛಾಯಾಗ್ರಾಹಕರಾದ ದೀಪಕ್ ರಾಜ್ ಉಪ್ಪಳ ಮುಂತಾದವರು ಉಪಸ್ಥಿತರಿದ್ದರು.
ಮಂಜೇಶ್ವರ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯಿಂದ ಸ್ವಾತಂತ್ರ್ಯ ದಿನಾಚರಣೆ.
ಮಂಜೇಶ್ವರ:- ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮಂಜೇಶ್ವರ ಘಟಕ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ ದ್ವಜಾರೋಹಣ ನಡೆಯಿತು. ಯುನಿಟ್ ಅಧ್ಯಕ್ಷ ಬಶೀರ್ ಕನಿಲ ದ್ವಜಾರೋಹಣಗೈದರು. ಈ ಸಂದರ್ಭ ಆರಿಫ್ ಮಚ್ಚoಪಾಡಿ, ಹಸೈನಾರ್ ಕುಂಜತ್ತೂರು, ಕೃಷ್ಣ ಶೆಟ್ಟಿಗಾರ್, ಶ್ರೀಮತಿ ಚಿತ್ರಲೇಖ, ಶ್ರೀಮತಿ ಕುಮುದಾ, ನಾರಾಯಣ ಕುಂಜತ್ತೂರು, ಯಾಕೂಬ್ ಜಾಹೀ, ಹಮೀದ್ ಹೊಸಂಗಡಿ, ಯು. ಸದ್ಯೋಜಾತ ಆಚಾರ್ಯ ಉದ್ಯಾವರ, ಸುದರ್ಶನ್, ಎಸ್. ಟಿ ಇಬ್ರಾಹಿಂ ಪತ್ರಕರ್ತರಾದ ರಹಿಮಾನ್ ಉದ್ಯಾವರ, ರತನ್ ಕುಮಾರ್ ಹೊಸಂಗಡಿ, ಮೊದಲಾದವರು ಉಪಸ್ಥಿತರಿದ್ದರು.
ಮಂಜೇಶ್ವರ:- ಶ್ರೀ ಅಯ್ಯಪ್ಪ ಫ್ರೆಂಡ್ಸ್ ಕ್ಲಬ್ (ರಿ.) ಹೊಸಂಗಡಿ ಇವರ ಆಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವನ್ನು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರ ವಠಾರದಲ್ಲಿ ಆಚರಿಸಲಾಯಿತು. ಕ್ಷೇತ್ರದ
ಸೇವಾ ಸಮಿತಿ ಅಧ್ಯಕ್ಷರೂ, ಹಾಗೂ ಮಂಜೇಶ್ವರ ಸಾರ್ವಜನಿಕ ಗಣೇಶೋತ್ಸವ ಅಧ್ಯಕ್ಷರಾಗಿರುವ ಶ್ರೀ ಪದ್ಮನಾಭ ಕಡಪ್ಪರರವರು
ಧ್ವಜಾರೋಹಣಗೈದರು. ಕ್ಷೇತ್ರದ ಪ್ರಧಾನ ಅರ್ಚಕರಾದ ಪು. ತಿರುಮಲೇಶ ಆಚಾರ್ಯ, ಕ್ಲಬ್ಬಿನ ಗೌರವಾಧ್ಯಕ್ಷರಾದ ಅಡ್ವಕೇಟ್ ನವೀನ್ ರಾಜ್ ಕೆ.ಜೆ, ಅಧ್ಯಕ್ಷರಾದ ಸಂದೀಪ್ ಶಾಂತಿನಗರ, ಪ್ರಧಾನ
ಕಾರ್ಯದರ್ಶಿಯಾದ ಅಖಿಲೇಶ್ ಅಂಗಡಿಪದವು, ಕೋಶಾಧಿಕಾರಿಯಾದ ಕೀರ್ತಿರಾಜ್, ಹಾಗೂ ಕ್ಲಬ್ಬಿನ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಸಿಹಿತಿಂಡಿ ವಿತರಿಸಲಾಯಿತು.
ಮಂಜೇಶ್ವರ:- ಮಿಂಜ ಗ್ರಾಮ ಪಂಚಾಯತ್ ನ 11 ನೇ ವಾರ್ಡ್ ಕೊಡ್ಡೆ ಅಂಗನವಾಡಿಯಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಆಶಲತಾ ಬಿ.ಎಂ ಧ್ವಜಾರೋಹಣಗೈದರು. ಈ ವೇಳೆ ಸ್ಥಳೀಯ ಯಶಸ್ವಿ ಫ್ರೆಂಡ್ಸ್ ಕ್ಲಬ್ ನ ಸದಸ್ಯರು, ಎ.ಎಲ್.ಎಂ.ಎಸ್.ಸಿ ಕಮಿಟಿ ಸದಸ್ಯರು, ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ದಿವ್ಯಲತಾ ಸ್ವಾಗತಿಸಿ, ದಾಮೋದರ ಕೊಡ್ಡೆ ವಂದಿಸಿದರು.
ಮಂಜೇಶ್ವರ:- ಯಶಸ್ವಿ ಪ್ರೆಂಡ್ಸ್ ಕ್ಲಬ್ ಕೊಡ್ಡೆ ಇದರ ವತಿಯಿಂದ 75 ನೇ ಸ್ವಾತಂತ್ರೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಾಮಾಜಿಕ ಮುಂದಾಳು ಇಬ್ರಾಹಿಂ ಧ್ವಜಾರೋಹಣಗೈದರು. ಕ್ಲಬ್ಬಿನ ಅಧ್ಯಕ್ಷರಾದ
ದಾಮೋದರ ಕೊಡ್ಡೆ ಶುಭ ಹಾರೈಸಿದರು. ಗಿರಿಧರ್ ಕೊಡ್ಡೆ ಸ್ವಾಗತಿಸಿ, ಶರತ್ ಕೊಡ್ಡೆ ವಂದಿಸಿದರು.
ವರ್ಕಾಡಿ:- ವರ್ಕಾಡಿ ಕ್ಷೀರ ಉತ್ಪಾದಕ ಸಹಕಾರಿ ಸಂಘದ ವತಿಯಿಂದ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ನೂಜಿ ಇವರು ನೆರವೇರಿಸಿದರು.ಈ ವೇಳೆ ಸಂಘದ ಪಧಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಮಂಜೇಶ್ವರ:- ಮುಸ್ಲಿಂ ಯೂತ್ ಲೀಗ್ ಮಂಜೇಶ್ವರ ಪಂಚಾಯತ್ ಸಮಿತಿಯ 13 ನೇ ವಾರ್ಡ್ ವತಿಯಿಂದ ಹೊಸಂಗಡಿ ರೈಲ್ವೆ ಗೇಟ್ ಬಳಿ ದೇಶದ 75 ನೇ ಸ್ವಾತಂತ್ರೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಪ್ರಸ್ತುತ ವಾರ್ಡ್ ಸದಸ್ಯರಾದ ರಾಘವರವರು ಧ್ವಜಾರೋಹಣಗೈದರು. ಐ.ಯು.ಎಂ.ಎಲ್ 13 ನೇ ವಾರ್ಡ್ ಅಧ್ಯಕ್ಷ ಹಸನ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ಮೊಹಮ್ಮದ್, ಮುಸ್ಲಿಂ ಯೂತ್ ಲೀಗ್ ಮಂಡಲ ಉಪಾಧ್ಯಕ್ಷ ಫಾರೂಕ್ ಸಿ. ಕೆ, ಮುಸ್ಲಿಂ ಯೂತ್ ಲೀಗ್ ಪಂಚಾಯತ್ ಕಾರ್ಯದರ್ಶಿ ಇರ್ಷಾದ್ ಸಿ.ಕೆ, ವೈಟ್ ಗಾರ್ಡ್ ಕ್ಯಾಪ್ಟನ್ ಯಾಕೂಬ್, ಜಾಯಿ ಮೊದಲಾದವರು ಉಪಸ್ಥಿತರಿದ್ದರು.
ವರ್ಕಾಡಿ:- ಡಿ.ವೈ.ಎಫ್.ಐ ಸೇನ್ಯ ಯೂನಿಟ್ ನೇತೃತ್ವದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನದ ಅಂಗವಾಗಿ ಸುಳ್ಯಮೆಯಿಂದ ಸೇನ್ಯ ತನಕ ರಸ್ತೆ ಶುಚಿಕರಣ ನಡೆಯಿತು. ಈ ವೇಳೆ ಸಹಕರಿಸಿದ ಎಲ್ಲರಿಗೂ ಡಿ.ವೈ.ಎಫ್.ಐ ಕೊಡ್ಲಮೊಗರು ವಿಲ್ಲೇಜ್ ಸಮಿತಿ ಅಭಿನಂದನೆ ಸಲ್ಲಿಸಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಿ.ವೈ.ಎಫ್.ಐ ಕೊಡ್ಲ ಮೊಗರು ಲೋಕಲ್ ಕಾರ್ಯದರ್ಶಿ ಬೂಬ, ಡಿ.ವೈ.ಎಫ್.ಐ ವಿಲ್ಲೇಜ್ ಅಧ್ಯಕ್ಷರಾದ ಅಶ್ರಫ್ ಸಿಪಿಐಮ್ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಮೊಯಿದಿನ್ ಕುಂಞಿ ಮತ್ತು ಪಕ್ಷದ ನಾಯಕರಾದ ಸುಂದರ, ಮೊಯಿದಿನ್ ಇಸ್ಮಾಯಿಲ್, ಡಿ.ವೈ.ಎಫ್.ಐ ನಾಯಕರಾದ ಸುಜಿತ್, ಇರ್ಫಾನ್, ಬಷೀರ್, ರಹೀಮ್, ಡಿ.ವೈ.ಎಫ್.ಐ ಸೇನ್ಯ ಯೂನಿಟ್ ಕಾರ್ಯದರ್ಶಿಯಾದ ಯಶೋಧ ಇನ್ನಿತರ ನಾಯಕರು ಭಾಗವಹಿಸಿದ್ದರು.
ಕುಂಬ್ದಾಜೆ:- ಆಜಾದಿ ಕಾ ಅಮೃತ್ ಮಹೋತ್ಸವ್ ಎಂದು ಕರೆಯಲ್ಪಡುವ ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕುಂಬ್ದಾಜೆ ಪೊಡಿಪಳ್ಳಂ ಶ್ರೀ ವಿಷ್ಣುಮೂರ್ತಿ ಯೂತ್ ಕ್ಲಬ್ ನ ವತಿಯಿಂದ ಕೋವಿಡ್ ಪ್ರೋಟೋಕಾಲ್ ಗಳನ್ನು ಅನುಸರಿಸಿ ಆಚರಿಸಿತು. ಧ್ವಜಾರೋಹಣವನ್ನು ಪ್ರಸ್ತುತ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿರುವ ಶ್ರೀ ಪ್ರಭಾಕರ ನಾಯ್ಕ್ ಪಾಲೆಕ್ಕಾರ್ ನಿರ್ವಹಿಸಿದರು. ಕ್ಲಬ್ಬಿನ ಅಧ್ಯಕ್ಷರಾದ ಶ್ರೀ ಶಿವರಾಮನ್ ಪೊಡಿಪಳ್ಳ, ಉಪಾಧ್ಯಕ್ಷರಾದ ಶ್ರೀ ಶ್ರೀಧರನ್ ಮತ್ತು ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು. ಈ ವೇಳೆ ಸಿಹಿತಿಂಡಿ ವಿತರಿಸಲಾಯಿತು.
ಮೀಯಪದವು:- ಮೀಂಜ ಗ್ರಾಮ ಪಂಚಾಯತ್ ನಲ್ಲಿ ದೇಶದ 75 ನೇ ವರ್ಷದ ಸ್ವಾತಂತ್ರೋತ್ಸವ ವನ್ನು ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್. ಶೆಟ್ಟಿ ಧ್ವಜರೋಹಣಗೈದರು. ಪಂಚಾಯತ್ ಉಪಾಧ್ಯಕ್ಷ ಜಯರಾಮ್ ಬಲ್ಲಂಗುಡೆಲ್, ಪಂಚಾಯತ್ ಚಯರ್ ಪರ್ಸನ್ ಶ್ರೀಮತಿ ರುಕ್ಯ, ಪಂಚಾಯತ್ ಸದಸ್ಯರಾದ ಶ್ರೀಮತಿ ಮಿಶ್ರಿಯ, ಮಾಜಿ ಸದಸ್ಯರಾದ ಮಹಮ್ಮದ್ ಕುಂಞ, ಪಂಚಾಯತ್ ಉದ್ಯೋಗಸ್ಥರಾದ ಸಂದೇಶ್, ಕೃಷ್ಣಮೊಳ್ ಮೊದಲಾದವರು ಉಪಸ್ಥಿತರಿದ್ದರು.
ಮೊರತ್ತಣೆ :- ಶ್ರೀ ಕೃಷ್ಣ ಜನ್ಮಾಷ್ಟಮಿ ಸೇವಾ ಸಮಿತಿಯ ವತಿಯಿಂದ ನಡೆದ 75 ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್ ನೆರವೇರಿಸಿದರು. ಈ ವೇಳೆ ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜಕುಮಾರ್ ಮುಟ್ಲ, ನಾಗಪ್ಪ ಅರಿಬೈಲ್, ಗೋಪಾಲ ಸುವರ್ಣ ಉಪಸ್ಥಿತರಿದ್ದರು. ಉಮೇಶ್ ಅರಿಂಗುಲ ಸ್ವಾಗತಿಸಿ, ಧನ್ಯವಾದವಿತ್ತರು.
ಸ್ವಾತಂತ್ರ್ಯ ಹೋರಾಟಗಾರರನ್ನು ಸದಾ ನಾವೆಲ್ಲರೂ ಸ್ಮರಿಸಬೇಕು- ಸುಜಿತ್ ಕುಮಾರ್ ಬೇಕೂರು.
**********************
ಉಪ್ಪಳ: ಗಡಿ ಕಾಯುವ ಯೋಧರನ್ನು, ಸ್ವಾತಂತ್ರ್ಯಕ್ಕೆ ಬೇಕಾಗಿ ಹೋರಾಡಿದವರನ್ನು ಸದಾ ನಾವು ಸ್ಮರಿಸಬೇಕು, ಪ್ರಸ್ತುತ ಈ ಕೊರೋನಾ ಮಹಾ ಮಾರಿಯ ವಿರುದ್ಧ ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸರು, ವೈದ್ಯರು, ಸಮಾಜ ಸೇವಕರ ಸೇವೆ ಅಪಾರವಾದುದೆಂದು ಯುವ ಅಧ್ಯಾಪಕ, ಬರಹಗಾರ, ದೈವ ನರ್ತಕ ಸುಜಿತ್ ಕುಮಾರ್ ಬೇಕೂರು ನುಡಿದರು. ಅವರು ಮಂಗಲ್ಪಾಡಿ ಗ್ರಾಮ ಪಂಚಾಯತಿನ ಪುಳಿಕುತ್ತಿ ಅಂಗನವಾಡಿಯಲ್ಲಿ ನಡೆದ ಎಪ್ಪತೈದನೆಯ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವಾರ್ಡ್ ಸದಸ್ಯೆ ಶ್ರೀಮತಿ ಫಾತಿಮತ್ ರುಬೀನ ಧ್ವಜಾರೋಹಣಗೈದರು. ಸಿದ್ದಪ್ಪ ಅಗರ್ತಿಮೂಲೆ, ಶಿವಕುಮಾರ್, ಶ್ಯಾಮಲ, ಜಯಲಕ್ಷ್ಮೀ, ಕೊಗ್ಗು ಪುಳಿಕುತ್ತಿ, ಕಾವ್ಯ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಶ್ರೀಮತಿ ಸರೋಜಿನಿ ಟೀಚರ್ ಸ್ವಾಗತಿಸಿ, ವಂದಿಸಿದರು.
ಕುಳೂರು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ:
ಮಂಜೇಶ್ವರ : ದೇಶಕ್ಕೆ ದೇಶವೇ ಸಂಭ್ರಮಿಸುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಈ ವರ್ಷ ಆಚರಿಸುತ್ತಿದ್ದು, ಕೊರೋನ ಕಾರಣದಿಂದ ಎಲ್ಲೆಡೆ ಸರಳವಾಗಿ ಆಚರಿಸಬೇಕಾದ ಅನಿವಾರ್ಯತೆ ಇದ್ದುದರಿಂದ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೂ ಸರಳವಾಗಿ ಆಚರಿಸಲಾಯಿತು.
ಬೆಳಿಗ್ಗೆ ನಡೆದ ಧ್ವಜಾರೋಹಣವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ವಾರ್ಡ್ ಸದಸ್ಯರಾದ ಜನಾರ್ಧನ ಪೂಜಾರಿಯವರು ಹಿರಿಯರು ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ಹಸಿವು ಮುಕ್ತ ದೇಶವನ್ನು ಕಟ್ಟುವ ಕರೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಜಯರಾಜ್ ಶೆಟ್ಟಿ ಚಾರ್ಲ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು, ಉಪಾಧ್ಯಕ್ಷೆ ಯಾದ ಸುಪ್ರೀತಾ ಕುಳೂರು ಹೊಸಮನೆ, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಕಾರ್ಯದರ್ಶಿ ಶಶಿಕುಮಾರ್ ಕುಳೂರು, ಕೋಶಾಧಿಕಾರಿ ಚಿಕ್ಕಪ್ಪ ಶೆಟ್ಟಿ ಎಲಿಯಾಣ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ನಾರಾಯಣ ನೈಕ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳು, ರಕ್ಷಕ ಶಿಕ್ಷಕ ಸಂಘದ ಸದಸ್ಯರು ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇರಾದವರಿಗೆ ಬಹುಮಾನ ವಿತರಿಸಲಾಯಿತು. ಎಲ್ಲರಿಗೂ ಸಿಹಿ ತಿಂಡಿ ಹಂಚಿ, ರಾಷ್ಟ್ರಗೀತೆ ಹಾಡುವ ಮೂಲಕ ಕಾರ್ಯಕ್ರಮ ಕೊನೆಗೊಂಡಿತು.
ಕಳೆದ ಒಂದೂವರೆ ವರ್ಷದಿಂದ ಮಕ್ಕಳ ಕಲರವ ಇಲ್ಲದೆ ಕಳೆಗುಂದಿರುವ ಶಾಲೆಯು ಇದೀಗ ಮಕ್ಕಳ ಬರುವಿಕೆಯನ್ನು ಎದುರು ನೋಡಿಕೊಂಡು, ಮಕ್ಕಳ ಕಲಿಕೆಯನ್ನು ಆಕರ್ಷಿಸಲು ಶಾಲೆಯಲ್ಲಾದ ಇತ್ತೀಚಿನ ಬದಲಾವಣೆ ಮತ್ತು ಆನ್ಲೈನ್ ಮೂಲಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ ಕುಳೂರು ಯೂಟ್ಯೂಬ್ ಚಾನಲಿನಲ್ಲಿ ಪ್ರಸಾರ ಮಾಡಲಾಯಿತು.
ವರದಿ : ರತನ್ ಕುಮಾರ್ ಹೊಸಂಗಡಿ
