ಮಾನ್ಯ : ಬ್ರದರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್(ರಿ.) ವಿಷ್ಣು ಮೂರ್ತಿ ನಗರ, ಮಾನ್ಯ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಕೋವಿಡ್ ಮಾನದಂಡಗಳನ್ನು ಅನುಸರಿಸಿಕೊಂಡು ಆಚರಿಸಲಾಯಿತು. ಕ್ಲಬ್ಬಿನ ಹಿರಿಯ ಸದಸ್ಯರಾದ ವಿನಯ್ ಕುಮಾರ್ ಎಂ ಎಸ್ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಕ್ಲಬ್ಬಿನ ಗೌರಾವಾಧ್ಯಕ್ಷರಾದ ಮುದ್ದುಕೃಷ್ಣ ಸಿ. ಎಚ್ ವಹಿಸಿದರು.
ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ವೆಂಕಟ್ರಾಜ ಮಾನ್ಯ, ಉಪಾಧ್ಯಕ್ಷರು ಪುರುಷೋತ್ತಮ ಮಾನ್ಯ, ಜೊತೆ ಕಾರ್ಯದರ್ಶಿ ವಿವೇಕ್ ಮಾನ್ಯ, ಕೋಶಾಧಿಕಾರಿ ರವಿ ಕಿರಣ್ ಮಾನ್ಯ, ಅಲ್ಲದೇ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು. ಕುಮಾರಿ ಶ್ರೇಯ, ಕುಮಾರಿ ಪವಿತ್ರ, ಕುಮಾರಿ ಪ್ರೇಕ್ಷ ಪ್ರಾರ್ಥನೆ ಹಾಡಿದರು. ಜಿತೇಂದ್ರ ಮಾನ್ಯ ನಿರೂಪಿಸಿದರು.
