ಮಂಜೇಶ್ವರ : ಹದಿನೆಂಟು ಪೇಟೆಗಳ ಕ್ಷೇತ್ರವೆಂದೇ ಖ್ಯಾತಿ ಪಡೆದ ಮಂಜೇಶ್ವರ ಶ್ರೀ ಮದ್ ಅನಂತೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ಇಂದು ಬೆಳಗ್ಗೆ ದೇವಾಲಯದ ಮುಂಭಾಗದ ನಾಗನ ಕಟ್ಟೆಯಲ್ಲಿ ಕೋವಿಡ್ ಮಾನದಂಡಗಳನ್ನು ಅನುಸರಿಸಿಕೊಂಡು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ನಾಗ ದೇವರಿಗೆ ಪಂಚಾಮೃತ ಅಭಿಷೇಕ, ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ಸೇರಿದಂತೆ ಹಲವು ಸೇವೆಗಳು ನೆರವೇರಿತು.ನಾಗರ ಪಂಚಮಿಗೂ ತಟ್ಟಿದ ಕೋವಿಡ್ :
ಪ್ರತಿ ವರ್ಷವೂ ಜಿಲ್ಲೆಯ, ಅಂತರ್ಜಿಲ್ಲೆಯ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಿದ್ದು ಆದರೆ ಈ ಬಾರಿ ಕೋವಿಡ್ ಮಾನದಂಡ ಮತ್ತು ಅಂತರ್ಜಿಲ್ಲಾ ಗಡಿಯಲ್ಲಿ ಕಠಿಣ ನಿಯಂತ್ರಣವಿರುವ ಕಾರಣದಿಂದ ಇತರ ಜಿಲ್ಲೆಗಳಿಂದ ಬರುವ ಭಕ್ತರಿಗೆ ಆಗಮಿಸಲು ಸಾಧ್ಯವಾಗಿಲ್ಲ. ಇವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆನ್ಲೈನ್ ಸೇವಾ ಸೌಲಭ್ಯವನ್ನು ಒದಗಿಸಲಾಗಿದ್ದು ಈ ಮುಖಾಂತರ ಸಾವಿರಕ್ಕೂ ಹೆಚ್ಚು ಭಕ್ತರು ಸೇವೆಗೆ ನೋಂದಣಿ ಮಾಡಿದ್ದಾರೆ. ಅವರಿಗೆ ಅಂಚೆಯ ಮುಖಾಂತರ ಪ್ರಸಾದವನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಎಂದು ಕ್ಷೇತ್ರದ ಅಧಿಕೃತರು ತಿಳಿಸಿದ್ದಾರೆ.
ವರದಿ : ರತನ್ ಕುಮಾರ್ ಹೊಸಂಗಡಿ
