ಯುಗಪುರುಷ ನರೇಂದ್ರಮೋದಿ ವಿದ್ಯಾಲಯ | ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಸಂಗೀತ ದಿನಾಚರಣೆ
June 25, 2025
0
ಕಾಸರಗೋಡು : ಅಡ್ಕತ್ತಬೈಲ್ ಗುಡ್ಡೆ ದೇವಸ್ಥಾನದ ಬಳಿಯ ಯುಗಪುರುಷ ನರೇಂದ್ರಮೋದಿ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಸಂಗೀತ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ವಾನ್ ಕಲ್ಮಾಡಿ ಶ್ರೀ ಸದಾಶಿವ ಆಚಾರ್ಯ ಭಾಗವಹಿಸಿದರು ರುಡ್ ಸೆಟ್ ಸಂಸ್ಥೆಯ ಹಿರಿಯ ತರಬೇತುದಾರ ಶ್ರೀ ನಾಗೇಶ್ ಮಲ್ಯ ಇವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶ್ರೀ ಸತೀಶ್ ಕಾಮತ್, ಶ್ರೀಮತಿ ದೇವಿಕಾ ಶೆಣೈ ಹಾಗೂ ಶಾಲಾ ಸಹ ಪಟ್ಯೇತರ ಚಟುವಟಕೆಗಳ ಉಸ್ತುವಾರಿಯಾಗಿರುವ ಶಾಹಿರತ್ನ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀವಳ್ಳಿ ಉಪಸ್ಥಿತರಿದ್ದರು.ಶ್ರೀ ನಾಗೇಶ್ ಮಲ್ಯ ಇವರು ಯೋಗದ ಕುರಿತು ವಿವರಣೆಯನ್ನು ನೀಡಿ ಯೋಗದ ಕೆಲವು ಆಸನಗಳನ್ನು ಪ್ರದರ್ಶಿಸಿದರು. ವಿದ್ವಾನ್ ಸದಾಶಿವ ಆಚಾರ್ಯ ಸಂಗೀತದ ವಿವರಣೆಯನ್ನು ತಿಳಿಸಿ ಹಾಡುಗಳನ್ನು ಹಾಡಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿದರು.ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು. ಶಾಲಾ ಶಿಕ್ಷಕಿಯಾದ ಶ್ರೀಮತಿ ಸವಿತಾ ಸ್ವಾಗತಿಸಿ ಶ್ರೀಮತಿ ಮಾಲಾಶ್ರೀ ವಂದಿಸಿದರು ಹಾಗೂ ಶ್ರೀಮತಿ ಸುಷ್ಮಾ ಕಾರ್ಯಕ್ರಮ ನಿರೂಪಿಸಿದರು.
Tags


.jpeg)
.jpeg)
