ಉಡುಪಿ, ಪಡುಕುತ್ಯಾರು: ರಾಜ್ಯದ ಕರಾವಳಿಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಬೃಹತ್ ಮಟ್ಟದ ಕೋವಿಡ್ ಲಸಿಕಾ ಶಿಬಿರವು ಆನೆಗುಂದಿ ಮಹಾ ಸಂಸ್ಥಾನದ ನೇತೃತ್ವದಲ್ಲಿ ನಡೆದಿರುವುದು ಅತ್ಯಂತ ಸಂತಸ ತಂದಿದೆ. ಎರಡು ದಿನಗಳಲ್ಲಿ 4550 ಮಂದಿಗೆ ಲಸಿಕೆ ನೀಡುವ ಮೂಲಕ ನಮ್ಮ 17 ಚಾತುರ್ಮಾಸ್ಯಗಳಲ್ಲಿ ಇದು ದಾಖಲೆಗಳ ಪಟ್ಟಿಗೆ ಸೇರ್ಪಡೆಗೊಂಡಿದೆ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು. ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಎರಡು ದಿನಗಳ ಕಾಲ ಬೃಹತ್ ಮಟ್ಟದ ಕೋವಿಡ್ ಲಸಿಕಾ ಚುಚ್ಚುಮದ್ದು ಶಿಬಿರದ ಸಮಾರೋಪದಲ್ಲಿ ದಾನಿಗಳಿಗೆ ಮತ್ತು ವೈದ್ಯಕೀಯ ಸಿಬಂಧಿಗಳಿಗೆ ನಡೆಸಲಾದ ಅಭಿನಂದನೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಮಹಾಸಂಸ್ಥಾನದಲ್ಲಿ ಮಠದ ಶಿಷ್ಯರಾದ ಬೆಂಗಳೂರಿನ ಕುಮಾರ ಆಚಾರ್ಯ, ವಿದ್ವಾನ್ ರಾಘವೇಂದ್ರ ಸ್ಥಪತಿ ಹಾಗೂ ನರಸಿಂಹಮೂರ್ತಿ ಆಚಾರ್ಯ ಅವರು ಲಸಿಕೆಯನ್ನು ಪ್ರಾಯೋಜಿಸಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸ್ತುತ್ಯರ್ಹ ಸೇವೆ ಮಾಡಿದ್ದಾರೆ . ಅವರ ಆಶೋತ್ತರಗಳನ್ನು ಭಗವಂತ ಈಡೇರಿಸಲಿ ಎಂದು ಅವರು ಹಾರೈಸಿದರು.
ದಾನಿಗಳಾದ ಕುಮಾರ ಆಚಾರ್ಯ ಬೆಂಗಳೂರು, ವಿದ್ವಾನ್ ರಾಘವೇಂದ್ರ ಸ್ಥಪತಿ, ನರಸಿಂಹ ಮೂರ್ತಿ ಆಚಾರ್ಯ ಬೆಂಗಳೂರು ಇವರಿಗೆ ಮಹಾಸಂಸ್ಥಾನದ ವತಿಯಿಂದ ಶಾಲು ಹೊದಿಸಿ ಹಾರ ಫಲತಾಂಬೂಲ ಸಮರ್ಪಿಸಿ ಸನ್ಮಾನಿಸುವ ಮೂಲಕ ಕೃತಜ್ಞಾತಾ ಸಮರ್ಪಣೆ ಸಲ್ಲಿಸಲಾಯಿತು. ಕಾರ್ಯಕ್ರಮವನ್ನು ಆಯೋಜಿಸಲು ನೇತೃತ್ವ ನೀಡಿದ ನೋಡಲ್ ಅಧಿಕಾರಿ ದಿನೇಶ್ ಆಚಾರ್ಯ ಪಡುಬಿದ್ರೆ ಅವರಿಗೆ ಗೌರವಾರ್ಪಣೆ ನಡೆಸಲಾಯಿತು.
ಎರಡು ದಿನಗಳ ಕಾಲ ನಡೆದ ಲಸಿಕಾ ಶಿಬಿರಕ್ಕೆ ಆಗಮಿಸಿ ಸೂಕ್ತ ಸಲಹೆಗಳನ್ನು ನೀಡಿದ ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಾಗಭೂಷಣ ಉಡುಪ, ಅಧಿಕಾರಿಗಳಾದ ಸುಬ್ರಹ್ಮಣ್ಯ ಶೇರಿಗಾರ, ಡಾ. ಸುಬ್ರಹ್ಮಣ್ಯ ಭಟ್ ಮಂಚಕಲ್ ಅವರನ್ನು ಮಹಾಸಂಸ್ಥಾನದ ವತಿಯಿಂದ ಗೌರವಿಸಲಾಯಿತು.
ಇದೇ ವೇಳೆ ಬೆಂಗಳೂರಿನ ಸಕಾರಿಯಾ ಆಸ್ಪತ್ರಯೆ ವೈದ್ಯಕೀಯ ತಂಡದ ಮೀನಾ ಭಂಡಾರಿ, ಡಾ. ಮನೀಶ್, ವಿನಿ ಫೆರ್ನಾಂಡಿಸ್, ಗಾಯರ್ತಿ, ಆನಂದ್ ಅವರಿಗೆ ಸೇರಿದಂತೆ ಎಲ್ಲಾ ಸಿಬಂದಿಗಳನ್ನು ಹಾರಾಪಣೆ ಫಲ ತಾಂಬೂಲ ನೀಡಿ ಗೌರವಿಸಲಾಯಿತು. ನೊಂದಾವಣೆ ನಡೆಸಲು ಸಹಕರಿಸಿದ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲಾ ಸ್ವಯಂಸೇವಕರಿಗೆ ಮಹಾಸಂಸ್ತಾನದ ಶಾಲು ನೀಡುವ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷರಾದ ವಡೇರಹೋಬಳಿ ಶ್ರೀಧರ ಆಚಾರ್ಯ ಅವರು ಮಹತ್ ಕಾರ್ಯಕ್ಕೆ ಪ್ರಾಯೋಜಕತ್ವ ನೀಡಿದ ದಾನಿಗಳಿಗೆ ಕೃತಜ್ಷತೆ ಸಲ್ಲಿಸಿ ಎರಡನೇ ಡೋಸ್ ಕೂಡಾ ಉಚಿತವಾಗಿ ದಾನಿಗಳ ಮೂಲಕ ಲಭಿಸುವಂತೆ ಗುರುಗಳ ದಯೆ ಇರಲಿ ಎಂದು ಆಶಿಸಿದರು. ವಿದ್ವಾನ್ ರಾಘವೇಂದ್ರ ಸ್ಥಪತಿ ಬೆಂಗಳೂರು ಅವರು ದಾನಿಗಳ ಪರವಾಗಿ ಮಾತನಾಡಿ ಇದು ನಮ್ಮ ಜೀವನದ ಅವಿಸ್ಮರಣೀಯ ದಿನವೆಂದು ಬಣ್ಣಿಸಿ, ಅವಕಾಶಕೊಟ್ಟ ಮಹಾಸಂಸ್ಥಾನಕ್ಕೆ ಕೃತಜ್ಞತೆಯನ್ನು ಸಮರ್ಪಿಸುತ್ತೇವೆ ಎಂದು ನುಡಿದರು. ಶಿಷ್ಟ ವೃಂದದವರು ಗುರುಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆನೀಡಿದ ಅವರು ಕೆಲವು ಕಡೆಗಳಲ್ಲಿ ಲಸಿಕಾ ಶಿಬಿರಗಳನ್ನು ನಡೆಸಿದರೂ ಆನೆಗುಂದಿ ಜಗದ್ಗುರುಗಳವರ ಸನ್ನಿಧಾನದಲ್ಲಿ ಸೇವೆಗೈಯಬೇಕೆಂಬ ನಮ್ಮ ಬಹುದಿನದ ಕನಸು ನನಸಾಗಿದೆ. ಜಗದ್ಗುರುಗಳವರ ಹಾಗೂ ವಿಶ್ವಕರ್ಮನ ದಯೆಯಿದ್ದರೆ ಅಸಾಧ್ಯ ಯಾವುದೂ ಇಲ್ಲ ಎನ್ನುವುದನ್ನು ಪ್ರಸ್ತುತ ವ್ಯವಸ್ತಿತವಾಗಿ ನಡೆದ ಶಿಬಿರ ತೋರಿಸಿ ಕೊಟ್ಟಿದೆ ಎಂದು ಅವರು ನುಡಿದರು.
ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್. ಆಚಾರ್ಯ ಕುತ್ಯಾರು, ಕೋಶಾಧಿಕಾರಿ ಅರವಿಂದ ವೈ.ಆಚಾರ್ಯ ಬೆಳುವಾಯಿ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ಪ್ರಧಾನ ಸಂಚಾಲಕ ಬಿ. ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಆನೆಗುಂದಿ ಗುರುಸೇವಾ ಪರಿಷತ್ ಅಧ್ಯಕ್ಷ ರೂಪೇಶ್ ಆಚಾರ್ಯ ಶಿರ್ವ, ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕರಂಬಳ್ಳಿ ಜಯಕರ ಆಚಾರ್ಯ , ಶ್ರೀ ಸರಸ್ವತೀ ಮಾತೃಮಂಡಳಿ ಅಧ್ಯಕ್ಷೆ ಸಂದ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಬೆಳುವಾಯಿ ಸುಂದರ ಆಚಾರ್ಯ , ಕೆ. ರಾಘವೇಂದ್ರ ಆಚಾರ್ಯ ಉಡುಪಿ, ಕೆ.ನಾಗರಾಜ ಆಚಾರ್ಯ ಕಾಡಬೆಟ್ಟು, ಎಚ್ ರತ್ನಾಕರ ಆಚಾರ್ಯ ಉದ್ಯಾವರ, ಪ್ರಶಾಂತ ಆಚಾರ್ಯ ಕಟಪಾಡಿ, ಶ್ರೀಧರ ಜೆ.ಆಚಾರ್ಯ ಕಟಪಾಡಿ, ಕೆ.ಜೆ ಗುರುರಾಜ್ ಆಚಾರ್ಯ, ಶಾಲಿನಿ ಜಯಕರ ಆಚಾರ್ಯ, ಯಜ್ಷೇಶ್ವರ ಆಚಾರ್ಯ ಕುತ್ಯಾರು, ಅಶೋಕ ಆಚಾರ್ಯ ಕುತ್ಯಾರು, ಗಣೇಶ್ ಆಚಾರ್ಯ ಕೆಮ್ಮಣ್ಣು, ಬಾಲಕೃಷ್ಣ ಆಚಾರ್ಯ ಮೂಡಬಿದ್ರೆ, ಮಲ್ಲೇಶ್ ಆಚಾರ್ಯ ಮೂಡಬಿದ್ರೆ, ಸತೀಶ್ ಆಚಾರ್ಯ ಸುರುಳಿ, ದಿನೇಶ್ ಆಚಾರ್ಯ ಕುಳಾಯಿ, ಉಮೇಶ್ ಆಚಾರ್ಯ ಅಲಂಕಾರ್, ದಿನೇಶ್ ಆಚಾರ್ಯ ಶಕ್ತಿನಗರ, ಜನಾರ್ಧನ ಆಚಾರ್ಯ ಕನ್ಯಾನ, ರತ್ನಾಕರ ಆಚಾರ್ಯ ಪಡುಕುತ್ಯಾರು ಉಪಸ್ಥಿತರಿದ್ದರು. ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಮಹಾಸಂಸ್ಥಾನದ ಆಪ್ತ ಸಹಾಯಕ ಲೋಲಾಕ್ಷ ಶರ್ಮಾ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂಬಿ ಆಚಾರ್ ಧನ್ಯವಾದವನ್ನಿತ್ತರು.
ಎರಡು ದಿನಗಳ ಕಾಲ ನಡೆಯುವ ಲಸಿಕಾ ನಾಲ್ಕು ಸಾವಿರದ ಐನೂರ ಐವತ್ತು ಮಂದಿ ಸಾರ್ವಜನಿಕ ಬಂಧುಗಳಿಗೆ ಉಚಿತ ಲಸಿಕೆ ನೀಡಲಾಯಿತು. ಬೆಳಗ್ಗೆ ಗಂಟೆ ಏಳರಿಂದ ಸಂಜೆ ಐದರ ವರೆಗಿನ ಕಾಲಾವಧಿಯನ್ನು ಹತ್ತು ವಿಭಾಗಗಳಾಗಿ ವಿಂಗಡಿಸಿ ವ್ಯವಸ್ಥಿತವಾಗಿ ಲಸಿಕೆ ಹಂಚಲಾಯಿತು. ಅವರು ಬೆಂಗಳೂರಿನ ಸಕಾರಿಯಾ ಆಸ್ಪತ್ರೆಯ ಇಪ್ಪತ್ತೊಂದು ಮಂದಿಯ ಪರಿಣತ ವೈದ್ಯರ ತಂಡವು ಎರಡು ದಿನಗಳ ಶಿಬಿರದಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ನಡೆಸಿತ್ತು. ಕಾರ್ಯಕ್ರಮದ ನೇತೃತ್ವವನ್ನು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ವಹಿಸಿತ್ತು, ಆನೆಗುಂದಿ ಗುರುಸೇವಾ ಪರಿಷತ್, ಶ್ರೀ ಸರಸ್ವತೀ ಮಾತೃಮಂಡಳಿ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ, ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್, ಅಭಿವೃದ್ದಿ ಟ್ರಸ್ಟ್ ನವರು ಸಹಕಾರ ನೀಡಿದ್ದರು.
