ಸಿ.ಐ.ಟಿ.ಯು ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಬಂದ್ಯೋಡ್ನಲ್ಲಿ ಸಂಜೆ ಧರಣಿ
October 13, 2021
0
ಮಂಜೇಶ್ವರ:- ಪ್ರತಿಭಟನಾ ನಿರತ ರೈತರನ್ನು ಕೇಂದ್ರ ಗೃಹ ಸಹ ಮಂತ್ರಿ ಅಜಯ್ ಮಿಶ್ರರ ಮಗನಾದ ಆಶಿಶ್ ಮಿಶ್ರನ ನೇತೃತ್ವದಲ್ಲಿ ವಾಹನ ಅಪಘಾತ ನಡೆಸಿ, ಕೊಲೆ ನಡೆಸಿದನ್ನು ಪ್ರತಿಭಟಿಸಿ ಸಿ.ಐ.ಟಿ.ಯು ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಬಂದ್ಯೋಡ್ ನಲ್ಲಿ ಇಂದು ಸಂಜೆ ಧರಣಿ ನಡೆಸಿತು. ಸಿ.ಐ.ಟಿ.ಯು ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕೆ. ಭಾಸ್ಕರನ್ ಉದ್ಘಾಟಿಸಿ ಮಾತನಾಡಿದರು. ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದ್ದರು. ಮೊಯಿದು ಬಂದ್ಯೋಡ್, ಹರೀಶ್ ಬೇರಿಕೆ, ಸಂಕಯ್ಯ ಶೆಟ್ಟಿ, ಸಿಯಾಬ್, ರಝಕ್ ಮಾಡ ಮೊದಲಾದವರು ಉಪಸ್ಥಿತರಿದ್ದರು.
Tags
