ಮಧೂರು ಗ್ರಾಮ ಪಂಚಾಯತ್ ಸದಸ್ಯರೂ, ಬೆದ್ರಡ್ಕ ಅಮ್ಮುಕೆರೆ ಶ್ರೀ ಸಿ ಎಚ್ ಬಾಬು ಮತ್ತು ಶ್ರೀ ಮತಿ ಜಾನಕಿ ಇವರ ಪ್ರಥಮ ಪುತ್ರನಾದ ಶ್ರೀ ಉದಯ ಕುಮಾರ್ ಏಳು ವರ್ಷಗಳ ಹಿಂದೆ ಮಲ್ಲಿಕಾ ಎಂಬುವರನ್ನು ವಿವಾಹವಾಗಿದ್ದು ಇವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವೃಧ್ದಾಶ್ರಮ, ಸರಕಾರಿ ಆಸ್ಪತ್ರೆ, ಅಂಗನವಾಡಿ, ಬುದ್ದಿಮಾಂದ್ಯ ಮಕ್ಕಳ ಜೊತೆಗೂಡಿ ಸಂತೋಷದಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಂತೆ ಈ ವರ್ಷ ಪುಳ್ಕೂರು ಎಸ್ಟಿ ಕಾಲನಿ ಕೊರಗ ಸಮುದಾಯ ಇವರೊಂದಿಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಕೂಡ್ಲು, ಸ್ಟಾಂಡಿಂಗ್ ಸಮಿತಿ ಡೆವಲಪ್ ಮೆಂಟ್ ಚೇರ್ಮೆನ್ ಶ್ರೀ ರಾಧಾಕೃಷ್ಣ ಸೂರ್ಲು, ವೆಲ್ಫೆರ್ ಸ್ಟಾಂಡಿಂಗ್ ಕಮಿಟಿ ಚೇರ್ಪರ್ಸನ್ ಶ್ರೀಮತಿ ಯಶೋಧ ಕೂಡ್ಲು, ಆರೋಗ್ಯ ಮತ್ತು ವಿಧ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಉಮೇಶ್ ಗಟ್ಟಿ, ವಾರ್ಡ್ ಸದಸ್ಯೆ ಶ್ರೀಮತಿ ಅಂಬುಳಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಮಾಧವ ಮಾಸ್ತರ್ ಕೂಡ್ಲು, ಮಾಜಿ ಸ್ಟಾಂಡಿಂಗ್ ಸಮಿತಿ ಚೇರ್ಮೇನ್ ಶ್ರೀ ಗಣೇಶ್ ಪಾರೆಕಟ್ಟೆ, ಭಾರತೀಯ ಜನತಾ ಪಕ್ಷ ಮಧೂರು ಪಂಚಾಯತ್ ಸಮಿತಿ ಅಧ್ಯಕ್ಷರಾದ ಶ್ರೀ ರವೀಂದ್ರ ರೈ ಮುಂತಾದವರು ಉಪಸ್ಥಿತರಿದ್ದರು. ಇವರು “ಸ್ನೇಹ ಜೀವಿ” ಎಂಬ ವಾಟ್ಸಪ್ ಗ್ರೂಪ್ ಕಟ್ಟಿಕೊಂಡು ಜನಪ್ರಿಯರಾದ ಇವರಿಗೆ 2012ರಲ್ಲಿ ದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಸಮಾಜ ಸೇವಕರಿಗೆ ನೀಡುವ ಡಾ. ಬಾಬ ಸಾಹೇಬ್ ಬಿಆರ್ ಅಂಬೇಡ್ಕರ್ ಪ್ರಶಸ್ತಿಯು ಇವರಿಗೆ ಲಬಿಸಿರುತ್ತದೆ.
ವರದಿ ಮತ್ತು ಚಿತ್ರಗಳು : ದೀಪಕ್ ರಾಜ್ ಉಪ್ಪಳ
