ಮಂಜೇಶ್ವರ:- ಭಾರತೀಯ ಜನತಾ ಪಾರ್ಟಿ ಮಹಿಳಾಮೋರ್ಚಾ ಸಮಿತಿ ಮಂಜೇಶ್ವರ ಇದರ ಆಶ್ರಯದಲ್ಲಿ ಮುರತ್ತನೆಯ ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ನ ಸಭಾಂಗಣದಲ್ಲಿ ಕೇಂದ್ರ ಸರಕಾರದ ನೂತನ ಯೋಜನೆಗಳಾದ ಇ-ಶ್ರಮ ಕಾರ್ಡ್ ಮತ್ತು ರಾಷ್ಟ್ರೀಯ ಆರೋಗ್ಯ ಕಾರ್ಡ್ ನೊಂದಾವಾಣೆ ಶಿಬಿರ ನಡೆಯಿತು. ಕಾರ್ಯಕ್ರಮವನ್ನ ಮಂಜೇಶ್ವರ ಬ್ಲಾಕ್ ಪಂಚಾಯತ್ ಸಮಿತಿ ಸದಸ್ಯೆ, ರಾಷ್ಟ್ರೀಯ ಮಹಿಳಾಮೋರ್ಚಾ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್ ಪಜ್ವ ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನ ಬಿಜೆಪಿ ಮಹಿಳಾ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಶ್ರೀಮತಿ ಮಮತಾ ಕುಲಾಲ್ ವರ್ಕಾಡಿ ವಹಿಸಿದ್ದರು.
ಒ.ಬಿ.ಸಿ ಮೋರ್ಚಾ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪೂಜಾರಿ ಕಡಂಬಾರು ಭಂಡಾರ ಮನೆ, ವರ್ಕಾಡಿ ಗ್ರಾಮ ಪಂಚಾಯತ್ ಸದಸ್ಯರಾದ:- ರಾಜ್ ಕುಮಾರ್ ಶೆಟ್ಟಿ ಮುಟ್ಲ, ಶ್ರೀಮತಿ ಪದ್ಮಾವತಿ, ಶ್ರೀಮತಿ ಗೀತಾ ಭಾಸ್ಕರ್, ವರ್ಕಾಡಿ ಗ್ರಾಮ ಪಂಚಾಯತ್ ನ ಆರೋಗ್ಯ, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾಲತ, ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿ ಕಾರ್ಯದರ್ಶಿ ರಾಹುಲ್ ಕೂಡ್ಲು, ಸ್ವದೇಶಿ ಕಂಪೆನಿಯ ವರ್ಕಾಡಿ ಚಾರ್ಜ್ ಇನ್ಸ್ಪೆಕ್ಟರ್ ಸಿಂಧೂರ, ತಾಂತ್ರಿಕ ತಂತ್ರಜ್ಞ ದಯಾನಂದ ಮಾಡ, ಮಹಿಳಾ ಮೋರ್ಚಾ ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತುಳಸಿ ಕುಮಾರಿ ಪ್ರಾರ್ಥನೆ ಹಾಡಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ವೇಳೆ ಫಲಾನುಭವಿಗಳಿಗೆ ಕಾರ್ಡ್ ವಿತರಿಸಲಾಯಿತು. ಹಾಗೂ ಮೊಬೈಲ್ ರೇಡಿಯೇಶನ್ ಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಸಿಂಧೂರರವರರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಡ್ ಗಳ ನೊಂದಾವಣೆಗೆ ಊರಿನ ಬಹುತೇಕ ಮಂದಿ ಭಾಗವಹಿಸಿ, ಕೇಂದ್ರ ಸರಕಾರದ ಯೋಜನೆಗೆ ಅಭಿನಂದನೆ ಸಲ್ಲಿಸಿದರು.
