ಮಾನ್ಯ : ಮಹಿಳಾ ಐಕ್ಯವೇದಿ ಬದಿಯಡ್ಕ ಪಂಚಾಯತ್ ಸಮಿತಿ ಆಶ್ರಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿಂದೂ ಐಕ್ಯವೇದಿ ರಾಜ್ಯ ಅಧ್ಯಕ್ಷೆ ಶ್ರೀಮತಿ ಕೆ ಪಿ ಶಶಿಕಲಾ ಟೀಚರ್ ನಿರ್ವಹಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಶ್ರೀಮತಿ ಅನಿತಾ ಮಾನ್ಯ ವಹಿಸಿದರು. ವೇದಿಕೆಯಲ್ಲಿ ಹಿಂದೂ ಐಕ್ಯವೇದಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಸತಿ ಕೋಡತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಸಂತಿ ಕುಂಬಳೆ, ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಅಜಿತಾ, ಜಿಲ್ಲಾ ಸಮಿತಿ ಸದಸ್ಯೆ ಶ್ರೀಮತಿ ಸುನೀತ ಟೀಚರ್, ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ಭಟ್, ಹಿಂದೂ ಐಕ್ಯವೇದಿ ಗೌರವಾಧ್ಯಕ್ಷರು ಶ್ರೀ ನವೀನ್ ಚಂದ್ರ ಮಾಸ್ತರ್,ಶ್ರೀ ಮಧುಚಂದ್ರ ಮಾನ್ಯ, ಶ್ರೀ ಮಹೇಶ್ ಭಟ್ ವಳಕ್ಕುಂಜ, ಶ್ರೀ ಪ್ರಕಾಶ್ ಕಾರ್ಮಾರು, ಶ್ರೀ ಹರೀಶ್ ರಾವ್ ಮುಂಡೋಡು, ಶ್ರೀ ಗಿರೀಶ್ ಮಾನ್ಯ, ಶ್ರೀ ಕಮಲಾಕ್ಷ ಮಾನ್ಯ, ಹಿರಿಯರಾದ ಶ್ರೀ ಎಸ್ ಗೋಪಾಲ, ಶ್ರೀ ಗೋಪಾಲಕೃಷ್ಣ ಅಳಕೆ, ಶ್ರೀ ಬಾಲಕೃಷ್ಣ ಮಣಿಯಾಣಿ ನೀರ್ಚಾಲು, ಶ್ರೀ ರಾಮ ಮಾನ್ಯ ಮುಂತಾದವರು ಉಪಸ್ಥಿತರಿದ್ದರು. ಶ್ರೀಮತಿ ಸಂದ್ಯಾ ಸ್ವಾಗತಿಸಿ, ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ಭಟ್ ವಂದಿಸಿದರು.
ಮಹಿಳಾ ಐಕ್ಯವೇದಿ ಬದಿಯಡ್ಕ ಪಂಚಾಯತ್ ಸಮಿತಿ ಆಶ್ರಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ
February 07, 2022
0
Tags
