ಮಂಗಳೂರು : ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗುತ್ತಿದ್ದು ರಥೋತ್ಸವವು ಇಂದು ಜರಗಲಿರುವುದು.
ಇಂದು ಬೆಳಿಗ್ಗೆಯಿಂದ ಉಷಾಪೂಜೆ ಗಣಪತಿ ಹವನ ಶ್ರೀ ದೇವರ ಬಲಿ ನವಕ ಕಲಶಾಭಿಷೇಕ, ರಥಕಲಶ, ಮಧ್ಯಾಹ್ನ ಮಹಾಪೂಜೆ ಶ್ರೀ ದೇವರ ಬಲಿ, ರಥಾರೋಹಣ, ರಥೋತ್ಸವ, ಮಹಾ ಅನ್ನಸಂತರ್ಪಣೆ ವಿವಿಧ ಕಾರ್ಯಕ್ರಮಗಳು ನಡೆದುಇಂದು ರಾತ್ರಿ 6ಗಂಟೆಯಿಂದ ರಥೋತ್ಸವ, ರಥಾವರೋಹಣ, ಚೆಂಡೆಸುತ್ತು ಬಲಿ ಸೇವೆಗಳು, ನೃತ್ಯಬಲಿ, ಬಟ್ಟಲು ಕಾಣಿಕೆ ಮತ್ತು ವಿವಿಧ ವೈದಿಕ ಕಾರ್ಯಕ್ರಮಗಳು ಜರಗಲಿದೆ. ಅಲ್ಲದೆ ರಾತ್ರಿ ಗಂಟೆ 09.30ರಿಂದ ಮಹಾಪೂಜೆ,ಶ್ರೀ ಭೂತಬಲಿ ಶಯನ ಕಾರ್ಯಕ್ರಮಗಳು ಜರಗಲಿರುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ದೇವಿ ಭಕ್ತವೃಂದ ಬೋಂದೆಲ್ ಇವರಿಂದ ಭಜನಾ ಕಾರ್ಯಕ್ರಮ ನಡೆದು ಸಂಜೆ 5ರಂದ ನಾದ ಸಂಕೀರ್ತನ ಬಳಗ ಮಂಗಳೂರು ಇವರಿಂದ ಭಜನಾ ಕಾರ್ಯಕ್ರಮ ಜರಗಲಿರುವುದು. ರಾತ್ರಿ 08ರಿಂದ ಅಂತಾರಾಷ್ಟ್ರೀಯ ಯುವ ಪ್ರತಿಭೆ ವಿಧೂಷಿ ಕುಮಾರಿ ಗ್ರೀಷ್ಮ ಬಿ ಸಾಲ್ಯಾನ್ ಇವರಿಂದ ನೃತ್ಯ ವಂದನ " ನೃತ್ಯ ಕಾರ್ಯಕ್ರಮ ಜರಗಲಿರುವುದು.
ವರದಿ ಮತ್ತು ಚಿತ್ರಗಳು : ವಂಶಿ ಪಂಡಿತ್ ಕಣ್ಣೂರು
