ಸಿಪಿಐ ಕಣ್ವತೀರ್ಥ ಬ್ರಾಂಚ್ ಸಮ್ಮೇಳನ |ಹಿರಿಯ ನೇತಾರ ಮೋನಪ್ಪ ಕೆ ಧ್ವಜಾರೋಹಣ ಮೂಲಕ ಚಾಲನೆ
March 02, 2022
0
ಸಿಪಿಐ ಕಣ್ವತೀರ್ಥ ಬ್ರಾಂಚ್ ಸಮ್ಮೇಳನ ಕಣ್ವತೀರ್ಥ ದ್ವಾರದ ಬಳಿಯ ಕೆ.ಕೆ. ನಿವಾಸದಲ್ಲಿ ಜರುಗಿತು. ಸಿಪಿಐ ಹಿರಿಯ ನೇತಾರ ಮೋನಪ್ಪ ಕೆ ಧ್ವಜಾರೋಹಣ ಮೂಲಕ ಚಾಲನೆ ನೀಡಿದರು. ಸಿಪಿಐ ನೇತಾರ ದಯಾಕರ ಮಾಡ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿವಿ. ರಾಜನ್ ಸಮ್ಮೇಳನವನ್ನು ಉದ್ಘಾಟಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪಿಲ್, ಸಿಪಿಐ ಜಿಲ್ಲಾ ಸಮಿತಿ ಸದಸ್ಯ ಅಜಿತ್ ಯಂಸಿ ಲಾಲ್ ಬಾಗ್, ಎಐಟಿಯುಸಿ ಜಿಲ್ಲಾ ನೇತಾರ ಮುಸ್ತಫಾ ಕಡಂಬಾರ್, ಸಿಪಿಐ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ ಮೊದಲಾದವರು ಸಮ್ಮೇಳನವನ್ನು ಉದ್ದೇಶಿಸಿ ಮಾತಾಡಿದರು. ಬ್ರಾಂಚ್ ಕಾರ್ಯದರ್ಶಿ ಕೇಶವ ಕಣ್ವತೀರ್ಥ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಕೃಷ್ಣಪ್ಪ ಕಣ್ವತೀರ್ಥ, ಮೋನು ಕುಚ್ಚಿಕ್ಕಾಡ್, ಉಮೇಶ್ ಕುಚ್ಚಿಕ್ಕಾಡ್, ಉಮೇಶ ಉಳಿಯ, ನಿರಂಜನ್, ರಾಮಕೃಷ್ಣ ಆಚಾರ್ಯ, ಗೋಪಾಲಕೃಷ್ಣ ಆಚಾರ್ಯ ಮೊದಲಾದವರು ವರದಿ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದರು. ಪ್ರಥಮ್ ಕಣ್ವತೀರ್ಥ ರಕ್ತಸಾಕ್ಷಿ ಪ್ರಮೇಯ ಮತ್ತು ಕಿರಣ್ ಮಾಡ ಸಂತಾಪ ಸೂಚಕ ಪ್ರಮೇಯ ಮಂಡಿಸಿದರು. ನೂತನ ಕಾರ್ಯದರ್ಶಿಯಾಗಿ ಕಿರಣ್ ಮಾಡ, ಸಹ ಕಾರ್ಯದರ್ಶಿಯಾಗಿ ಮೋನು ಕುಚಿಕ್ಕಾಡ್ ಆಯ್ಕೆಯಾದರು
Tags
