ಮಂಗಳೂರು : ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ವಾರ್ಷಿಕೋತ್ಸವದ ಪ್ರಯುಕ್ತ ಮಂಜುಶ್ರೀ ಸಂಭ್ರಮ-2022 ಕಾರ್ಯಕ್ರಮವು ಸಭಾ ಕಾರ್ಯಕ್ರಮ, ಅಭಿನಂದನಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ನಡೆದ ಸಭಾ ಕಾರ್ಯಕ್ರಮವನ್ನು ಭಾರತೀಯ ಜನತಾ ಪಕ್ಷ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಟೀಲ್ ಕನ್ಸ್ಟ್ರಕ್ಷನ್ಸ್ ಕೂಳೂರು ಇದರ ಮಾಲಕರಾದ ಶಿವರಾಮ್ ಕೋಟ್ಯಾನ್ ಪೆರ್ಮುದೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಪೋಲಿಸ್ ಆಯುಕ್ತರಾದ ಶಶಿ ಕುಮಾರ್, ಉದ್ಯಮಿ ರಾಮಚಂದ್ರ ಹೊಸಬೆಟ್ಟು, ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಕರ್ನಾಟಕ ಇದರ ಸಹ ಕಾರ್ಯದರ್ಶಿಯವರಾದ ಕೃಷ್ಣಮೂರ್ತಿ ಭಟ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಚಂದ್ರಾವತಿ ವಿಶ್ವನಾಥ್, ರೂಪಾಶ್ರೀ ಪೂಜಾರಿ, ಕೋಸ್ಟಲ್ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯವರಾದ ರಾಜೇಶ್ ಸ್ಕೈಲಾರ್ಕ್, ಹಿಂದೂ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾದ ಕೆ ಆರ್ ಶೆಟ್ಟಿ, ಪೆಪ್ಪೆರೆ ಪೇರೆರೆ ಸಿನಿಮಾದ ನಿರ್ಮಾಪಕರಾದ ನಿಶಾನ್ ಭಂಡಾರಿ, ಬದಿಯಡ್ಕ ಪಂಚಾಯತ್ ಮಾಜಿ ಸದಸ್ಯರಾದ ಮಂಜುನಾಥ ಡಿ ಮಾನ್ಯ, ಜೈ ತುಳುನಾಡ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಸುದರ್ಶನ್ ಸುರತ್ಕಲ್, ಮಂಗಳಮುಖಿಯವರಾದ ಐಶ್ವರ್ಯ ಮತ್ತು ವೃಂದ ಉಪಸ್ಥಿತರಿದ್ದರು. ವಿಶೇಷ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಿರುವ ಮಂಗಳಮುಖಿಯವರಾದ ಐಶ್ವರ್ಯ ಮತ್ತು ವೃಂದ ಅವರನ್ನು ಅಲ್ಲದೇ ಕಲಾ ಪ್ರಕಾರದಲ್ಲಿ ಸಾದನೆಗೈದ ಶ್ರೀಮತಿ ದಿವ್ಯಾ ರಾಘವೇಂದ್ರ, ಶ್ರೀ ವಿಪಿನ್ ಪಿ ಆಚಾರ್ಯ ಅವರನ್ನು ಅಭಿನಂದಿಸಲಾಯಿತು. ಯುವಕ ಮಂಡಲ ಸಮಿತಿ ಅಧ್ಯಕ್ಷರಾದ ಏಕನಾಥ್ರವರಿಗೆ, ಹಾಗೂ ಸಂಸ್ಥೆಗೆ ಸದಾ ಬೆನ್ನೆಲುಬಾಗಿರುವ ಮಹಾ ಪೋಷಕ, ಪೋಷಕಿಯರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಮಂಜುಶ್ರೀ ನ್ಯೂಸ್ ವಾಹಿನಿಯು ಆಯೋಜಿಸಿದ್ದ ಮಂಜುಶ್ರೀ ಸ್ವರ ಸಂಭ್ರಮ ಕಾರ್ಯಕ್ರಮದ ಪ್ರಥಮ ಬಹುಮಾನ ವಿಜೇತರಾದ ಪವಿತ್ರಾ ಆಚಾರ್ಯ ಪಾಣೆಮಂಗಳೂರು, ದ್ವಿತೀಯ ಬಹುಮಾನ ಪಡೆದ ಗಾಯತ್ರಿ ಬಂಜನ್ ಬಿ ಸಿ ರೋಡ್ ರವರಿಗೆ ಬಹುಮಾನ ವಿತರಿಸಲಾಯಿತು. ಪ್ರತೀಕ್ಷಾ ಬಲ್ಯಾಯ ಪ್ರಾರ್ಥನೆ ಹಾಡಿದರು. ಗಾಯತ್ರಿ ಬಂಜನ್ ಬಿ ಸಿ ರೋಡ್ ಅಭಿನಂದನಾ ಪತ್ರ ವಾಚಿಸಿದರು. ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿದರು. ಮಹೇಂದ್ರ ಜೈನ್ ನಿರೂಪಿಸಿದರು. ನಂತರ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ಜರಗಿತು. ವಿಶೇಷ ಆಕರ್ಷಣೆಯಾಗಿ ಟೀಮ್ ಮಂಜುಶ್ರೀ ತುಳುನಾಡ್(ರಿ.) ಕಲಾ ಚಾವಡಿ ಘಟಕದ ಮಂಜುಶ್ರೀ ಕಲಾವಿದರು ಕುಡ್ಲ ಇವರಿಂದ ಸಂಸ್ಥೆಯ ಸಂಸ್ಥಾಪಕರು ರಾಜ್ಯಾಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್ ರಚಿಸಿ ನಟಿಸಿ ನಿರ್ದೇಶಿಸಿರುವ ತುಳು ಹಾಸ್ಯಮಯ ನಾಟಕ ದಿಸೆ ತಿರ್ಗ್ನಗ ಪ್ರದರ್ಶನಗೊಂಡಿತು.
