ಕಡಂಬಾರು : ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು ಸಂಜೆ ಶ್ರೀ ಸುದರ್ಶನ ವೇದಿಕೆಯಲ್ಲಿ ನಡೆಯಿತು. ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಹಾಗೂ ಎಡನೀರು ಶ್ರೀಗಳಾದ ಶುಭಾಶೀರ್ವಚನಗೈದರು. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಬ್ಯಾಂಕ್ನ ಮುಖ್ಯಸ್ಥರಾದ ಶ್ರೀ ಮಹಾಬಲೇಶ್ವರ ಎಂ ಎಸ್ ವಹಿಸಿದರು. ವೇದಿಕೆಯಲ್ಲಿ ಕಟೀಲು ಕ್ಷೇತ್ರದ ಅನುವಂಶೀಯ ಅರ್ಚಕರಾದ ಶ್ರೀ ಕಮಲಾದೇವಿ ಅಸ್ರಣ್ಣ, ಮುಂಬೈಯ ಹೇರಂಭಾ ಇಂಡಸ್ಟ್ರೀಸ್ನ ಚೇರ್ಮಾನ್ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರಿ, ವೇದಮೂರ್ತಿ ದಡ್ಡಂಗಡಿ ಶ್ರೀ ಬಾಲಕೃಷ್ಣ ಭಟ್, ವಾಸ್ತುಶಿಲ್ಪಿ ಶ್ರೀ ರಮೇಶ್ ಕಾರಂತ್ ಬೆದ್ರಡ್ಕ, ಶ್ರೀ ಸೀತಾರಾಮ್ ಶೆಟ್ಟಿ ತಿಂಬರ ಮಂಗಲ್ಪಾಡಿ, ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರಾವಾಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಅನಲತ್ತಾಯ, ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಚಂದಪ್ಪ ಶೆಟ್ಟಿ ಕಜಕೋಡಿ, ಸೇವಾ ಸ್ಪೂರ್ತಿಯ ಅಧ್ಯಕ್ಷರಾದ ಶ್ರೀ ಭಾಸ್ಕರ ನೀರೊಳ್ಪೆ, ಶ್ರೀ ಶಿವಪ್ರಸಾದ್ ಹೊಳ್ಳ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀಧರ್ ಭಟ್ ಉಪ್ಪಳ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಜಯರಾಮ ಶೆಟ್ಟಿ ಧರ್ಮೆಮಾರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾಶಂಸನೆ ಗೈದರು.
ಈ ವೇಳೆ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ದಿನೇಶ್ ಕೃಷ್ಣ ತಂತ್ರಿ, ವೇದಮೂರ್ತಿ ದಡ್ಡಂಗಡಿ ಶ್ರೀ ಬಾಲಕೃಷ್ಣ ಭಟ್, ವಾಸ್ತುಶಿಲ್ಪಿಗಳಾದ ಶ್ರೀ ರಮೇಶ್ ಕಾರಂತ್ ಬೆದ್ರಡ್ಕ ಇವರನ್ನು ಸನ್ಮಾನಿಸಲಾಯಿತು. ಎಸ್ ಎನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಹರೀಶ್ ಧರ್ಮೆಮಾರ್ ಧರ್ಮಸ್ಥಳ ಶ್ರೀ ಡಾ. ವೀರೇಂದ್ರ ಹೆಗ್ಗಡೆಯವರ ಸಂದೇಶವನ್ನು ವಾಚಿಸಿದರು. ಕು. ಸಾಹಿತ್ಯ ಶೆಟ್ಟಿ ತಲೆಕಳ ಪ್ರಾರ್ಥನೆ ಹಾಡಿದರು. ಶ್ರೀ ಸತೀಶ್ ಅಡಪ್ಪ ಸ್ವಾಗತಿಸಿ, ವಂದಿಸಿದರು.
ಬೆಳಗ್ಗೆ ವೈದಿಕ ಕಾರ್ಯಕ್ರಮಗಳು ಗಣಪತಿ ಹೋಮ, ಅಷ್ಟಮಂಗಲ ದರ್ಶನ, ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ, ವಿಧಿ ನಿರ್ಣಯ, ಅವಸೃತ ಪ್ರೋಕ್ಷಣೆ, ಮಹಾ ಪೂಜೆ, ಬಲಿ ಉತ್ಸವ, ಪೂಜೆ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ ರಂಗಪೂಜೆ ಉತ್ಸವ ಬಲಿ ಮಂತ್ರಾಕ್ಷತೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಇವರಿಂದ ಪರಮಾನಂದ ಸಾಲ್ಯಾನ್ ರಚಿಸಿದ ಪರಮ ಪದ್ಮ ಕಲಾವಿದರು ಅಭಿನಯಿಸುವ ಶಿವ ಪುರ್ಸಾದ ಬಬ್ಬರ್ಯೆ ಪ್ರದರ್ಶನಗೊಂಡಿತು.

