ಉಡುಪಿ : ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಠ ಪಂಗಡ ಪ್ರವರ್ಗಕ್ಕೆ ವಿಭಾಗಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನವನ್ನು ಕೈಬಿಡಬೇಕು ಎಂದು ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ ಶ್ರೀಧರ ಆಚಾರ್ಯ ವಡೇರಹೋಬಳಿಯವರು ಬಿಜೆಪಿ ರಾಜ್ಯಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ನೀಡಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಿಲ್ಲ.
ಇತ್ತೀಚೆಗಿನ ದಿನಗಳಲ್ಲಿ ವಿಶ್ವಕರ್ಮ ಸಮುದಾಯದ ಕೆಲವೊಂದು ನಾಯಕರು ಕೆಲವು ಕಡೆಗಳಲ್ಲಿ ಸಭೆಗಳನ್ನು ನಡೆಸಿ ಪತ್ರಿಕಾ ಹೇಳಿಕೆ ನೀಡಿ ಸಮಾಜ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ.
ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಸರಕಾರದ ವತಿಯಿಂದ ತಮ್ಮ ಪ್ರಯತ್ನದ ಮೂಲಕ ಹಲವು ಕೊಡುಗೆಯನ್ನು ಸಚಿವರು ನೀಡಿದ್ದಾರೆ. ಅಂತಹ ಸಜ್ಜನಿಕೆಯು ಪ್ರಾಮಾಣಿಕ ಸಚಿವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.
ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಠ ಪಂಗಡ ಪ್ರವರ್ಗಕ್ಕೆ ವಿಭಾಗಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸುವ ಹುನ್ನಾರ ನಡೆಸುತ್ತಿರುವುದು, ನವಮಾಧ್ಯಮಗಳಲ್ಲಿ ಪ್ರಚಾರ ಮಾಡುವುದು, ಇವು ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಸಮಾಜದ ಬಗ್ಗೆ ಪರಂಪರೆಯ ಬಗ್ಗೆ ಸಾಮಾನ್ಯ ಪ್ರಜ್ಞೆ ಇಲ್ಲದಿರುವುದೇ ಕಾರಣ ಎಂದು ನಾವು ಭಾವಿಸುತ್ತೇವೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಭರತ ಖಂಡದಲ್ಲಿ ಬಹು ಪ್ರಾಚೀನ ಕಾಲದಿಂದಲೂ ವೈದಿಕ ಮತ್ತು ಶಿಲ್ಪವನ್ನು ಅನುಸರಿಸಿಕೊಂಡು ಭಾರತೀಯ ಸಂಸ್ಕೃತಿ ಯನ್ನು ಜಗತ್ತಿಗೆ ಪರಿಚಯಿಸಿವರು ವಿಶ್ವಕಮ೯ ಸಮಾಜದವರು ( ವಿಶ್ವಬ್ರಾಹ್ಮಣ ಪರಂಪರೆ) . ವಿಶ್ವಕರ್ಮ ಬ್ರಾಹ್ಮಣರಿಗೆ ತಮ್ಮದೇ ಆದ ಇತಿಹಾಸವಿದೆ. ಸಂಸ್ಕೃತಿಯಿದೆ, ಸಂಸ್ಕಾರಗಳಿವೆ. ಈ ಬಗ್ಗೆ ಕಡೆಗಣಿಸಲ್ಪಟ್ಟಾಗ ನಮ್ಮ ಪೂರ್ವಜರು ಕೋರ್ಟು ಮೂಲಕ ಬ್ರಾಹ್ಮಣರೆಂದು ಸಾಧಿಸಿ ತೋರಿಸಿದ ಇತಿಹಾಸವಿದೆ.
ಈ ಜಗತ್ತಿನ ಸಂಸ್ಕೃತಿಯ ರಾಯಭಾರಿಗಳು ವಿಶ್ವಕಮ೯ರು...ಜಗತ್ತಿಗೆ ಅನೇಕ ವಿಜ್ಞಾನಿಗಳನ್ನು , ಲೋಹಶಾಸ್ತ್ರಜ್ಜರನ್ನು , ವೈದಿಕ ವಿದ್ವಾಂಸರನ್ನು , ರಾಜನೀತಿ ಮಂತ್ರಿಗಳನ್ನು, ಜ್ಯೋತಿ೯ಶಾಸ್ತ್ರ ಪಂಡಿತರನ್ನು, ಅದ್ಭುತ ಕಲಾವಿದರನ್ನು ,ಧಾಮಿ೯ಕ ಗುರುಗಳನ್ನು ನೀಡಿದ ಶೇಷ್ಠ ಸಮಾಜ , ಪಂಚಕಸಬುಗಳ ಮೂಲಕ ಸಮಾಜದ ಅಭಿವೃದ್ಧಿ, ಕೃಷಿ, ನಿತ್ಯ ಜೀವನಕ್ಕೆ ಈ ಸಮಾಜದ ಕೊಡುಗೆ ಅಪಾರ ಇದು ಜಗತ್ತಿಗೇ ತಿಳಿದ ವಿಚಾರ.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠವು ಹಿಂದುಳಿದ ವಿಭಾಗಕ್ಕೆ ಒಳಪಟ್ಟ ವಿಶ್ವಕರ್ಮ ಸಮಾಜದ ಪ್ರಧಾನ ಗುರು ಪೀಠ. ಕರ್ನಾಟಕ, ಕೇರಳ, ತಮಿಳುನಾಡು ಮಹಾರಾಷ್ಟ ಆಂದ್ರಪ್ರದೇಶ ರಾಜ್ಯಗಳಲ್ಲಿ ಹಾಗೂ ದೇಶ ವಿದೇಶದಾದ್ಯಂತ ಅಪಾರ ಶಿಷ್ಯ ಸಮೂಹವನ್ನು ಹೊಂದಿದ ವಿಶ್ವಕರ್ಮ ಸಮಾಜದ ಅತ್ಯಂತ ಪ್ರಾಚೀನವಾದ ಕುಲಗುರುಪೀಠವಾಗಿದೆ.
ಪ್ರಸ್ತುತ ಪೀಠಾಧಿಪತಿಗಳಾಗಿರುವ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಮುಖೇನ ಹಮ್ಮಿಕ್ಕೊಂಡಿದ್ದಾರೆ. ಆನೆಗುಂದಿ ಪ್ರತಿಷ್ಠಾನವು ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಹುಬ್ಬಳ್ಳಿ, ಬೆಂಗಳೂರು, ನವಿ ಮುಂಬಯಿ ಪ್ರದೇಶಗಳ ಕಾಳಿಕಾಂಬಾ ವಿಶ್ವಕಮೇಶ್ವರ ದೇವಾಲಯಗಳ ಧರ್ಮದಶಿಗಳನ್ನೊಳಗೊಂಡ ಸಂಸ್ಥೆಯಾಗಿದ್ದು ಸಮಾಜ ಬಂಧುಗಳ ಕೇಂದ್ರ ಸ್ಥಾನವಾಗಿದೆ. ಆಡಳಿತಮಂಡಳಿಯ
22ದೇವಸ್ಥಾನಗಳ ಆಡಳಿತ ಮಂಡಳಿಯವರು ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಠ ಪಂಗಡ ಪ್ರವರ್ಗಕ್ಕೆ ವಿಭಾಗಕ್ಕೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿ ಲಿಖಿತವಾಗಿ ಪ್ರತಿಷ್ಠಾನಕ್ಕೆ ಮನವಿ ಮಾಡಿ ಈ ಬಗ್ಗೆ ರಾಜ್ಯ ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯಧ್ಯಕ್ಷರು ಸೇರಿದಂತೆ ಸಂಬಂಧಪಟ್ಟವರಿಗೆ ಪ್ರತಿಷ್ಠಾನವು ಮನವಿ ಮಾಡಬೇಕೆಂದು ತಿಳಿಸಿದ್ದಾರೆ. ಪರಮ ಪೂಜ್ಯ ಜಗದ್ಗುರುಗಳವರು ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಠ ಪಂಗಡ ಪ್ರವರ್ಗಕ್ಕೆ ವಿಭಾಗಕ್ಕೆ ಸೇರ್ಪಡೆಗೊಳಿಸಬಾರದೆಂಬ ನಿಲುವನ್ನು ಹೊಂದಿದ್ದಾರೆ. 46ಲಕ್ಷವಿರುವ ವಿಶ್ವಕರ್ಮ ಸಮಾಜದ ಬಹುಸಂಖ್ಯಾಕ ಮಂದಿಯ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ನಾವು ಈ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸುತಿದ್ದು ತಾವು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಯಾವುದೇ ಕಾರಣಕ್ಕೂ ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಠ ಪಂಗಡ ಪ್ರವರ್ಗಕ್ಕೆ ವಿಭಾಗಕ್ಕೆ ಸೇರ್ಪಡೆಗೊಳಿಸಲು ಬರುವ ಮನವಿಗಳನ್ನು ಪರಿಗಣಿಸಬಾರದಾಗಿ ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಸಮಾಜದ ಬಗ್ಗೆ ಕಾಳಜಿ ಇರುವ ವಿಶ್ವಕರ್ಮ ನಿಗಮವನ್ನು ಉಳಿದ ಸಮುದಾಯಗಳ ನಿಗಮ ಮಂಡಳಿಗೆ ಸಮಾನವಾಗಿ ಪರಿಗಣಿಸಿ ಅನುದಾನಗಳನ್ನು ಬಿಡುಗಡೆಗೊಳಿಸುವುದು ಸೇರಿದಂತೆ ವಿಶ್ವಕರ್ಮ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವ ಯೋಜನೆಗಳನ್ನು ರೂಪಿಸಬೇಕೆಂದು ವಿನಂತಿಸಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷರನ್ನೂ ಭೇಟಿ ಮಾಡಿ
ಮನವಿ ಸಲ್ಲಿಸುವ ಪ್ರತಿಷ್ಠಾನದ ನಿಯೋಗದಲ್ಲಿ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠ ಪ್ರತಿಷ್ಠಾನದ ಉಪಾಧ್ಯಕ್ಷ ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ್ ಕಳಿ ಚಂದ್ರಯ್ಯ ಆಚಾರ್,ಅಸೆಟ್ ನ ನಿಕಟಪೂರ್ವ ಅಧ್ಯಕ್ಷ , ಪ್ರತಿಷ್ಠಾನದ ವಿಶ್ವಸ್ತರಾದ ತ್ರಾಸಿ ಸುಧಾಕರ ಆಚಾರ್,ಪ್ರಥಮ ವಿಶ್ವಸ್ಥರಾದ ಮಂಗಳೂರು ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ್ ಕೇಶವ ಆಚಾರ್, ಪ್ರತಿಷ್ಠಾನದ ವಿಶ್ವಸ್ಥರಾದ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ, ಒಕ್ಕೂಟದ ಮಾಜೀ ಅಧ್ಯಕ್ಷ ರಾದ ಅಲೆವೂರು ಯೋಗೀಶ ಆಚಾರ್, ವಸಂತ ಆಚಾರ್ ಮೊದಲಾದವರು ಉಪಸ್ಥಿತರಿದ್ದರು.

