ಮಂಜೇಶ್ವರ:- ಪ್ರೊಪೆಷನಲ್ ನ್ಯಾಷನಲ್ ಪ್ರೊ ಚಾಂಪಿಯನ್ ಶಿಪ್ ಬೆಂಗಳೂರು ಇದರ ವತಿಯಿಂದ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್ ನಲ್ಲಿ ನಡೆದ ರಾಷ್ಟ್ರಮಟ್ಟದ ನ್ಯಾಷನಲ್ ಪ್ರೊ ಲೀಗ್ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಶ್ ಮತ್ತು ಡೆಡ್ ಲಿಫ್ಟ್ ಚಾಂಪಿಯನ್ ಶಿಪ್ 2022 ಸ್ಪರ್ಧೆಯಲ್ಲಿ ಭಾಗವಹಿಸಿದ ಹೊಸಂಗಡಿಯ ಫಿಟ್ನೆಸ್ ಜೋನ್ ಜಿಮ್ ಸಂಸ್ಥೆಯ ಆರು ಮಂದಿ ಸದಸ್ಯರು ಬೆಂಚ್ ಪ್ರೈಸ್ ನಲ್ಲಿ ಎರಡು ಗೋಲ್ಡ್, ಎರಡು ಸಿಲ್ವರ್ ಪದಕ, ಮತ್ತು ಡೆಡ್ ಲಿಫ್ಟ್ ನಲ್ಲಿ ಎರಡು ಸಿಲ್ವರ್ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಕಾಸರಗೋಡು ಜಿಲ್ಲೆಗೆ ಹೆಸರು ತಂದಿದ್ದಾರೆ. 17 ರಿಂದ 230ವರ್ಷದವರೆಗಿನ ಜೂನಿಯರ್ ವಿಭಾಗದ ದಲ್ಲಿ ನಡೆದ ಬೆಂಚ್ ಪ್ರೈಸ್ ನಲ್ಲಿ ಮೊಹಮ್ಮದ್ ಆಫ್ಸಲ್, ಮೊಹಮ್ಮದ್ ನಿಹಾಲ್, ಇಬ್ರಾಹಿಂ ಜಿಯಾನ್, ಅಬ್ದುಲ್ ಅಜೀಮ್ ಚಿನ್ನದ ಪದಕ ಪಡೆದಿರುತ್ತಾರೆ. ಅದೇ ರೀತಿ 11 ರಿಂದ 19 ವರ್ಷದ ವರೆಗಿನ ಸಬ್ ಜೂನಿಯರ್ ಮಟ್ಟದ ಡೆಡ್ ಲಿಫ್ಟ್ ಸ್ಪರ್ಧೆಯಲ್ಲಿ ಮೊಹಮ್ಮದ್ ಸೆಬಿಬ್, ದಿಶಿನ್ ಕನಿಲ ಬೆಳ್ಳಿ ಪದಕ ಪಡೆದಿರುತ್ತಾರೆ. ವಿಜೆತರಾದ ಇವರುಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು ಪೋರ್ಚುಗಲ್ನ ಮೇಯಾಸಿಟಿಯಲ್ಲಿ ಅಕ್ಟೋಬರ್ 6 ರಿಂದ 9 ರ ವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿರುವರು. ಈ ಸ್ಪರ್ಧೆಯಲ್ಲಿ ಹಲವು ದೇಶಗಳು ಭಾಗವಹಿಸುತ್ತಿದ್ದು, ಭಾರತ ದೇಶದಿಂದ ಕೇರಳದ ಪ್ರತಿನಿಧಿಗಳಾಗಿ ಕಾಸರಗೋಡು ಜಿಲ್ಲೆಯಿಂದ ಇವರು ಭಾಗವಹಿಸುತ್ತಿದ್ದು ಕಾಸರಗೋಡು ಜಿಲ್ಲೆಗೆ ಸಂತಸದ ವಿಷಯವಾಗಿದೆ. ಇವರಿಗೆ ಹೊಸಂಗಡಿಯ ಫಿಟ್ನೆಸ್ ಜೋನ್ ಜಿಮ್ ಸೆಂಟರ್ ಮಾಲಕರು ಕೋಚ್ ಆಗಿರುವ ಮೊಹಮ್ಮದ್ ಫಾರನ್ ತೊಕ್ಕೋಟು ತರಬೇತಿ ನೀಡುತ್ತಿದ್ದಾರೆ.
ಮಂಜೇಶ್ವರ ಹೊಸಂಗಡಿಯ ಫಿಟ್ನೆಸ್ ಜೋನ್ ಜಿಮ್ನ ಆರು ಮಂದಿ ಸದಸ್ಯರು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
July 29, 2022
0
Tags

