ಕೊಲೊಂಬೊ : ಟೀಂ ಇಂಡಿಯಾ ಅದ್ಭುತ ಪ್ರದರ್ಶನಕ್ಕೆ ಏಷ್ಯಾಕಪ್ ಟ್ರೋಫಿ ಕೈಸೇರಿದೆ. ಶ್ರೀಲಂಕಾ ವಿರುದ್ದಧ ಫೈನಲ್ ಪಂದ್ಯದಲ್ಲಿ ಭಾರತ ಕೇವಲ 6.1 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿದೆ. ಈ ಮೂಲಕ 8ನೇ ಏಷ್ಯಾಕಪ್ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ಶ್ರೀಲಂಕಾ ತಂಡವನ್ನು 50 ರನ್ಗೆ ಆಲೌಟ್ ಮಾಡಿ ಟೀಂ ಇಂಡಿಯಾ 51 ರನ್ ಟಾರ್ಗೆಟ್ ಪಡೆದಿತ್ತು. ಈ ಗುರಿಯನ್ನು 6.1 ಓವರ್ಗಳಲ್ಲಿ ಚೇಸ್ ಮಾಡಿ ಟ್ರೋಫಿ ಗೆದ್ದುಕೊಂಡಿದೆ.ಇಶಾನ್ ಕಿಶನ್ ಹಾಗೂ ಶುಭಮನ್ ಗಿಲ್ ಜೊತೆಯಾಟಕ್ಕೆ ಭಾರತ ನಿರಾಯಾಸವಾಗಿ ಟ್ರೋಫಿ ಗೆದ್ದುಕೊಂಡಿತು. ಗಿಲ್ ಅಜೇಯ 27 ರನ್ ಸಿಡಿಸಿದರೆ, ಕಿಶನ್ ಅಜೇಯ 23 ರನ್ ಸಿಡಿಸಿದರು. ಈ ಮೂಲಕ ಭಾರತ 10 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಟೀಂ ಇಂಡಿಯಾ ಹಲವು ದಾಖಲೆ ಬರೆದಿದೆ. ಫೈನಲ್ ಪಂದ್ಯದಲ್ಲಿ ಅತೀ ಹೆಚ್ಚಿನ ಬಾಲ್ ಉಳಿಸಿ ಗೆದ್ದ ದಾಖಲೆ ಬರೆದಿದೆ.
ಎಂಟನೇ ಏಷ್ಯಾಕಪ್ ಟ್ರೋಫಿ ಭಾರತದ ಮುಡಿಗೆ | ಕೇವಲ 6.1 ಓವರ್ನಲ್ಲಿ ಗುರಿ ತಲುಪಿ ದಾಖಲೆ
September 17, 2023
0
Tags

.jpeg)
.jpeg)