ಕಾಸರಗೋಡು : ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ(ರಿ) ಇದರ ಮಾರ್ಗದರ್ಶನದಲ್ಲಿ ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಶ್ರೀ ವಿಶ್ವಕರ್ಮ ಯುವಕ ಸಂಘದ ವತಿಯಿಂದ ಕನ್ಯಾ ಸಂಕ್ರಮಣದಂದು "ಶ್ರೀ ವಿಶ್ವಕರ್ಮ ಪೂಜೆ" ಜರಗಿತು. ಅಂದು ಬೆಳಿಗ್ಗೆ ಧ್ವಜಾರೋಹಣ ಗೈಯಲಾಯಿತು. ಸಂಜೆ 6 ಗಂಟೆಗೆ ಭಜನೆ ಪ್ರಾರಂಭವಾಗಿ 8 ಗಂಟೆಗೆ, ಮಾಯಿಪ್ಪಾಡಿ ಪುರೋಹಿತ ಶ್ರೀ ಕೇಶವ ಆಚಾರ್ಯರ ನೇತೃತ್ವದಲ್ಲಿ ಮಹಾಪೂಜೆ ನಡೆಯಿತು.ವಿಶೇಷ ಆಹ್ವಾನಿತರು ಊರ ಪರ ಊರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಮನ್ನಿಪ್ಪಾಡಿ ಶ್ರೀಮತಿ ವಸಂತಿ ನರಂಸಿಂಹ ಆಚಾರ್ಯ ಮುಖ್ಯೋಪಾಧ್ಯಾಯಿನಿ ಜಿ.ಎಲ್.ಪಿ. ಶಾಲೆ ಕೂಡ್ಲು, ತೇಜಸ್ ಆಚಾರ್ಯ ಕೊಲ್ಲಂಗಾನ ಪ್ರಥಮ ರಾಂಕ್ ಎಂ.ಎ.ಕನ್ನಡ ಕಣ್ಣೂರು ವಿಶ್ವವಿದ್ಯಾಲಯ, ಧನ್ಯಶ್ರೀ ಕೆ.ಎಚ್. ಕಂಬಾರ್ ತೃತೀಯ ರಾಂಕ್ ಎಂ.ಎ.ಕನ್ನಡ ಕಣ್ಣೂರು ವಿಶ್ವವಿದ್ಯಾಲಯ, ರಾಷ್ಟ್ರಮಟ್ಟ ಯೋಗ ಸಾಧಕರು ಆಕಾಶ್ ಪದ್ಮ ಅಡ್ಕತ್ತಬೈಲ್, ಕೌಸ್ತುಭ್ ತಾಳಿಪಡ್ಪು, ದೀಕ್ಷಾ ಭವಾನಿಶಂಕರ ಆಚಾರ್ಯ ಸ್ವರ್ಗ ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ(ರಿ) ಇದರ ಅಧ್ಯಕ್ಷರಾದ ಶ್ರೀ ಭುವನೇಶ ಆಚಾರ್ಯ ತಾಳಿಪ್ಪಡ್ಪು ಇವರು ಅಧ್ಯಕ್ಷ ಸ್ಥಾನ ವಹಿಸಿದರು,ವಿಶೇಷ ಅತಿಥಿಯಾಗಿ ಆಗಮಿಸಿದ ಕಾಸರಗೋಡಿನ ಸರಕಾರಿ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾl ಬಾಲಕೃಷ್ಣ ಹೊಸಂಗಡಿ ಇವರು ಶೈಕ್ಷಣಿಕ ವಿಷಯದ ಕುರಿತು ಮಾತನಾಡಿ ಸಾಧಕರ ಸಾಲಿನಲ್ಲಿ ವಿಶ್ವಕರ್ಮ ಸಮಾಜ ಬಾಂಧವರ ಹೆಸರುಗಳೇ ಬರುತ್ತಿರುವುದು ನಮ್ಮ ಸಮಾಜಕ್ಕೆ ಗೌರವ ತರುವ ವಿಚಾರವಾಗಿದೆ. ವಿಶ್ವಕರ್ಮ ಸಮಾಜದವರು ಮುಟ್ಟದ ಕಾರ್ಯಕ್ಷೇತ್ರಗಳಿಲ್ಲ ಎಂದು ನುಡಿದರು. ಯುವಕ ಸಂಘದ ಅಧ್ಯಕ್ಷರಾದ ಶೀತಲ್ ಕುಮಾರ್ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಯುವಕ ಸಂಘದ ಕೋಶಾಧಿಕಾರಿ ಶ್ರೀ ಸತ್ಯನಾರಾಯಣ ಆಚಾರ್ಯ ಸ್ವಾಗತಿಸಿ ಮಹಿಳಾ ಸಂಘದ ಕಾರ್ಯದರ್ಶಿ ಶ್ರೀಮತಿ ಶ್ರೀವಳ್ಳಿ ಗಣೇಶ ಆಚಾರ್ಯ ನಿರೂಪಣೆ ಮಾಡಿ ಯುವಕ ಸಂಘದ ಕಾರ್ಯದರ್ಶಿ ವಸಂತ್ ಕೆರೆಮನೆ ಧನ್ಯವಾದ ನೀಡಿದರು.






