ಬ್ಯೂರೋ ವರದಿ : ದಕ್ಷಿಣ ಕನ್ನಡ
ರಿಕ್ಷಾ ತೊಳೆಯುತಿದ್ದ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದು ಮೃತರನ್ನು ಹಾಸನ ಮೂಲದ ರಾಜು ಮತ್ತು ಕಡಬ ವ್ಯಾಪ್ತಿಯ ರಾಮಕುಂಜದ ದೇವರಾಜ್ ಎಂದು ತಿಳಿದು ಬಂದಿದೆ. ಇವರು ರೊಸಾರಿಯೋ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ ರಿಕ್ಷಾ ತೊಳೆಯುವ ಸಂದರ್ಭ ಸರ್ವಿಸ್ ವೈರ್ ತುಂಡಾಗಿ ಒಬ್ಬರ ಮೇಲೆ ಬಿದ್ದಿದೆ ಈ ವೇಳೆ ವಿದ್ಯುತ್ ಶಾಕ್ ಗೆ ಒಳಗಾದ ವ್ಯಕ್ತಿಯನ್ನು ರಕ್ಷಿಸಲು ತೆರಳಿದ ಇನ್ನೊಬ್ಬರು ಕೂಡ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಮೃತದೇಹಗಳು ವೆನ್ಲಾಕ್ ಆಸ್ಫತ್ರೆಯ ಶವಗಾರದಲ್ಲಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

