ಪೆರಡಾಲ ಶ್ರೀ ಉದನೇಶ್ವವರ ದೇವಸ್ಥಾನ | ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ
July 06, 2025
0
ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಸೇವಾ ಸಮಿತಿ ವತಿಯಿಂದ ಶ್ರೀಕ್ಷೇತ್ರದಲ್ಲಿ 08-08-2025ನೇ ಶುಕ್ರವಾರ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜರಗಿತು. ಈ ಸಂದರ್ಭದಲ್ಲಿ ಸೇವಾ ಸಮಿತಿ ಅಧ್ಯಕ್ಷರು ಜಯದೇವ ಖಂಡಿಗೆ, ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಕ್ಷೇತ್ರದ ಮೋಕ್ತೆಸರರು ಜಗನ್ನಾಥ ರೈ ಪೆರಡಾಲ ಗುತ್ತು, ಸೀತಾರಾಮ ನವಕಾನ, ಮಾಜಿ ಮೊಕ್ತೇಸರ ಪಿಜಿ ಚಂದ್ರಹಾಸ ರೈ, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳಾದ ಶ್ರೀಶ ಕುಮಾರ್ ಪಂಜಿತ್ತಡ್ಕ, ಭಾಸ್ಕರ್ ಪಂಜಿತ್ತಡ್ಕ ಸಂದೀಪ್ ಪೆರಡಾಲ ಮಾತೃ ಸಮಿತಿ ಪದಾಧಿಕಾರಿಗಳಾದ ಶ್ರೀಮತಿ ವಿನಯ ರೈ, ಗೀತಾ ಎಂ ಭಟ್ ಕ್ಷೇತ್ರದ ಅರ್ಚಕ ವೃಂದ ಸಿಬ್ಬಂದಿ ವರ್ಗ ಶಿವ ಶಕ್ತಿ ಕ್ಲಬ್ಬಿನ ಸದಸ್ಯರು, ಮುಂತಾದವರು ಉಪಸ್ಥಿತರಿದ್ದರು..

