ವೇಣೂರು ಬೆಳ್ಳಿ ಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
August 08, 2025
0
ವೇಣೂರು : ಫಲ್ಗುಣಿ ಸೇವಾ ಸಂಘ (ರಿ.) ವೇಣೂರು ಇದರ ಸಹಯೋಗದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವೇಣೂರು ಇದರ ಬೆಳ್ಳಿಹಬ್ಬ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಇದರ ಅನುವಂಶೀಯ ಆಡಳಿತ ಮೊಕ್ತೇಸರರಾದ ಎ ಜೀವಂಧರ ಕುಮಾರ್ ಅವರು ಶ್ರೀ ಕ್ಷೇತ್ರ ಪಡ್ಯಾರಬೆಟ್ಟು ಇಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಫಲ್ಗುಣಿ ಸೇವಾ ಸಂಘದ ಅಧ್ಯಕ್ಷರಾದ ಜಯರಾಜ್ ವಿ ಯಸ್, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಡಾ ಶಾಂತಿ ಪ್ರಸಾದ್, ಅಧ್ಯಕ್ಷರಾದ ಜಗದೀಶ್ಚಂದ್ರ ಡಿ ಕೆ, ಉಪಾಧ್ಯಕ್ಷರುಗಳಾದ ಪ್ರಶಾಂತ್ ಹೆಬ್ಬಾರ್ , ಸುದತ್ ಜೈನ್, ಕಾರ್ಯದರ್ಶಿ ಪ್ರಶಾಂತ್ ಹೆಗ್ಡೆ, ಕೋಶಾಧಿಕಾರಿ ಶ್ರೀಕಾಂತ ಉಡುಪ, ಜೊತೆ ಕಾರ್ಯದರ್ಶಿಗಳಾದ ಅರುಣ್ ಐಂಡಲ್ಕೆ, ಪ್ರಶಾಂತ್ ಜೈನ್, ಸ್ವಾಗತ ಸಮಿತಿ ಸದಸ್ಯರಾದ ಸುಂದರ ಹೆಗ್ಡೆ, ಉಮೇಶ್ ನಡ್ತಿಕಲ್ ,ಶ್ರೀಪತಿ ಉಪಾಧ್ಯಾಯ,ಸಮಿತಿ ಸದಸ್ಯರಾದ ಪ್ರಸನ್ನ ಹೆಬ್ಬಾರ್, ಧನಂಜಯ ಜೈನ್ ಮೂಡುಕೋಡಿ, ಪ್ರಮೋದ್ ಕುಮಾರ್, ಗಂಗಾಧರ ಆಚಾರ್ಯ, ಹೇಮಂತ ಭಟ್, ಸುಧೀರ್ ಬಜಿರೆ, ಸಜೇಶ್ ಪೆರ್ಮಾಣು, ಪ್ರವೀಣ್ ಭಂಡಾರಿ ಉಪಸ್ಥಿತರಿದ್ದರು.
Tags

