ಮಾನ್ಯ : ಭಾರತೀಯ ಜನತಾ ಪಕ್ಷ ಮಲ್ಲಡ್ಕ ವಾರ್ಡ್ ಮಾನ್ಯ ಘಟಕದ ವತಿಯಿಂದ ವಿಶೇಷ ಜನಸಂಪರ್ಕ ಸಭೆಯು ಮಾನ್ಯ ವಿಷ್ಣುಮೂರ್ತಿ ನಗರ ಸಮೀಪದ ವಿನಯ ಕುಮಾರ್ರವರ ಮನೆಯಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜನತಾ ಪಕ್ಷದ ಬದಿಯಡ್ಕ ಪಂಚಾಯತ್ ಸಮಿತಿ ಅಧ್ಯಕ್ಷರು, ಪಂಚಾಯತ್ ಸದಸ್ಯರಾದ ಶಂಕರ.ಡಿ ವಹಿಸಿದರು. ಮುಖ್ಯ ಅತಿಥಿಗಳಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಶೈಲಜಾ ಭಟ್, ಬ್ಲೋಕ್ ಪಂಚಾಯತ್ ಸದಸ್ಯರಾದ ಅಶ್ವಿನಿ ಭಟ್, ಬದಿಯಡ್ಕ ಪಂಚಾಯತ್ ಸದಸ್ಯರಾದ ಸ್ವಪ್ನ.ಕೆ, ಬದಿಯಡ್ಕ ಪಂಚಾಯತ್ ಯೋಜನಾ ಸಮಿತಿಯ ಉಪಾಧ್ಯಕ್ಷರಾದ ಮಹೇಶ್ ಭಟ್ ವಳಕ್ಕುಂಜ ಆಗಮಿಸಿದರು. ವಾರ್ಡ್ ಸಮಿತಿ ಮೇಲ್ವಿಚಾರಕರಾದ ಬಾಲಕೃಷ್ಣ ಮಣಿಯಾಣಿ, ಹಿರಿಯ ಕಾರ್ಯಕರ್ತರಾದ ವಿನಯ ಕುಮಾರ್ ಎಂ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಶೇಷವಾಗಿ "ಜನರೊಂದಿಗೆ ಜನಪ್ರತಿನಿಧಿ" ಎಂಬ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳನ್ನು ಪಡೆದು ವೇದಿಕೆಯಲ್ಲಿದ್ದ ಜನಪ್ರತಿನಿಧಿಗಳು ಅದಕ್ಕೆ ಉತ್ತರ ನೀಡಿದರು.
ಕಾರ್ಯಕ್ರಮದ ಮೊದಲು ಒಂದು ಅಶಕ್ತ ಕುಟುಂಬದ ಮನೆಗೆ ತೆರಳಿ ದಿನಸಿ ಸಾಮಾನುಗಳನ್ನೊಳಗೊಂಡ ಕಿಟ್ಟನ್ನು ಹಸ್ತಾಂತರಿಸಲಾಯಿತು. ಅಲ್ಲದೇ ಅಭಿವೃದ್ಧಿ ಹೊಂದಬೇಕಾಗಿರುವ ಕೆಲವು ಸ್ಥಳಗಳನ್ನು ಜಿಲ್ಲಾ ಪಂಚಾಯತ್ ಸದಸ್ಯರು, ಬ್ಲೋಕ್ ಪಂಚಾಯತ್, ಗ್ರಾಮ ಪಂಚಾಯತ್ ಸದಸ್ಯರು, ಮುಂತಾದವರು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಸ್ಥಳೀಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮವನ್ನು ಚಂದ್ರೇಶ್ ಮಾನ್ಯ ಸ್ವಾಗತಿಸಿ ಮಧುಚಂದ್ರ ಮಾನ್ಯ ವಂದಿಸಿದರು. ಪ್ರಶಾಂತ್ ಮಾನ್ಯ ನಿರೂಪಿಸಿದರು.
