ತೊಕ್ಕೊಟ್ಟು : ಕೊರೋನೋ ಲಾಕ್ ಡೌನ್ ನಲ್ಲಿ 14 ದಿನಗಳ ವರೆಗೆ ಅಶಕ್ತರಿಗೆ ಅನ್ನದಾನ ಸೇವೆ, 47 ದಿನಗಳಿಂದ ಉಳ್ಳಾಲ ಭಾಗದಲ್ಲಿ ಸುಮಾರು 697 ಅರ್ಹ ಕುಟುಂಬಗಳಿಗೆ ಸಹೃದಯಿ ದಾನಿಗಳ ನೆರವಿನಿಂದ ದಿನಸಿ ಸಾಮಗ್ರಿ ನೀಡಿದ ಶ್ರೀ ಸಾಯಿ ಪರಿವಾರ್ ಟ್ರಸ್ಟ್(ರಿ.) ತೊಕ್ಕೊಟ್ಟು.
ಬಿಜೆಪಿ ಕೋಟೆಕಾರು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ, ಮಂಗಳೂರು ಕ್ಷೇತ್ರ ಕೋಶಾಧಿಕಾರಿ ಶ್ರೀ ಜಿತೇಂದ್ರ ಶೆಟ್ಟಿ ತಲಪಾಡಿ ಗುತ್ತು ಇವರ ಸಹಕಾರದಿಂದ ಕೊರೋನಾ ವಾರಿಯಾರ್ಸ್ ಆಗಿ ದುಡಿಯುತ್ತಿರುವ ಸಾಯಿ ಪರಿವಾರ್ ಟ್ರಸ್ಟ್ ಗುರುತಿಸಿದ ಹೋಂ ಗಾರ್ಡ್ ಗಳಿಗೆ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕೋಟೆಕಾರು ಶಕ್ತಿ ಕೇಂದ್ರದ ಪ್ರಮುಖರಾದ ಶೇಖರ್ ಕಣೀರುತೋಟ, ಸಪ್ನ ಶೆಟ್ಟಿ, ಪುರುಷೋತ್ತಮ ಗಟ್ಟಿ ಹಾಗೆಯೇ ಶಿಕ್ಷಕರಾದ ವಸಂತ್ ಕೋಡಿ, ಬಾಬು ಮಾಸ್ಟರ್ ಮತ್ತು ಸಾಯಿ ಪರಿವಾರ್ ಟ್ರಸ್ಟಿನ ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ರಾಜೇಶ್ ಮಡಿವಾಳ, ಸತೀಶ್ ಭಟ್ನಗರ, ದೀಕ್ಷಿತ್ ಪೂಜಾರಿ, ಅರುಣ್ ದಬ್ಬೇಲಿ, ಸತೀಶ್ ಚೆಂಬುಗುಡ್ಡೆ, ಸಂಪತ್ ಧರ್ಮನಗರ, ಹಿತೇಶ್ ಉಳ್ಳಾಲಬೈಲ್, ಸಂಪತ್ ಪಿಲಾರ್, ಕೌಶಿಕ್ ಸೇವಂತಿಗುಡ್ಡೆ, ಶೈಲೇಶ್ ಸೇವಂತಿಗುಡ್ಡೆ, ಸಮಿತ್ ದರ್ಮನಗರ,ಸಂತೋಷ್ ಅಂಬ್ಲಮೊಗರು, ಪ್ರವೀಣ್ ರೈ ಕೆರೆಬೈಲ್ ಗುಡ್ಡೆ ಉಪಸ್ಥಿತರಿದ್ದರು.
ವರದಿ ಮತ್ತು ಚಿತ್ರ : ಸುಕೇಶ್ ಬೆಜ್ಜ
