ಮಂಜೇಶ್ವರ : ಕೇಂದ್ರ ಸರಕಾರವು ರಾಜ್ಯಕ್ಕೆ ಉಚಿತವಾಗಿ ಲಸಿಕೆ ವಿತರಿಸಿದರೂ ಮಂಜೇಶ್ವರ ಮಂಡಲವನ್ನು ಕೇರಳ ಸರಕಾರವು ಎಲ್ಲಾ ರೀತಿಯಿಂದಲೂ ಅವಗಣಿಸಿದೆ. ಕೇರಳದ ಎಲ್ಲಾ ಮಂಡಲಗಳಲ್ಲಿಯೂ 18 ಪ್ರಾಯ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ವಿತರಿಸಿದ್ದರೂ ಮಂಜೇಶ್ವರದಲ್ಲಿ 18 ಪ್ರಾಯ ಮೇಲ್ಪಟ್ಟವರಿಗೆ ಇನ್ನೂ ಕೋವಿಡ್ ಲಸಿಕೆ ಪ್ರಾರಂಭಗೊಂಡಿಲ್ಲ. ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಕೆಲವು ದಿನಗಳಿಂದ ಕೋವಿಡ್ ಲಸಿಕೆ ವಿತರಣೆಯು ಸ್ಥಗಿತಗೊಂಡಿದೆ. ಮಂಜೇಶ್ವರ ಮಂಡಲದಲ್ಲಿ ತಕ್ಷಣ ಕೋವಿಡ್ ಲಸಿಕೆ ವಿತರಣೆ ಪ್ರಾರಂಭಿಸದಿದ್ದಲ್ಲಿ ಭಾರತೀಯ ಜನತಾ ಯುವಮೋರ್ಚಾ ಉಗ್ರ ಹೋರಾಟ ನಡೆಸುವುದಾಗಿ ಯುವಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ ಇಚ್ಛಿಲಂಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
