ತೊಕ್ಕೊಟ್ಟು : ಮಸ್ಕತ್ ನಲ್ಲಿ ಉದ್ಯೋಗಿಯಾಗಿರುವ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನ ಮನೆ ಅವರು ತನ್ನ ಹುಟ್ಟು ಹಬ್ಬವನ್ನು ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಆಹಾರ ಸಾಮಗ್ರಿ ನೀಡಿ ಆಚರಿಸಿ ಮಾದರಿಯಾದರು. ಶ್ರೀ ಸಾಯಿ ಪರಿವಾರ್ ಗುರುತಿಸಿದ ಪಾರ್ಶ್ವ ವಾಯು ಪೀಡಿತರಾದ ಕುರ್ನಾಡು ಗ್ರಾಮದ ಮೋನಪ್ಪ ಟೈಲರ್, ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಕಿನ್ಯ ಗ್ರಾಮದ ಕಜೆ ನಿವಾಸಿ ಕೃಷ್ಣಪ್ಪ ಪೂಜಾರಿ, ಅಧಿಕ ರಕ್ತದೊತ್ತಡದಿಂದ ಆಘಾತಕ್ಕೊಳಗಾಗಿರುವ ಉಳ್ಳಾಲ ಧರ್ಮನಗರ ನಿವಾಸಿ ಯೋಗೀಶ್, ಪಾರ್ಶ್ವ ವಾಯು ಪೀಡಿತರಾಗಿರುವ ಧರ್ಮನಗರ ನಿವಾಸಿ ಪದ್ಮಾವತಿ ಸೇರಿದಂತೆ ನಾಲ್ಕು ಕುಟುಂಬಗಳಿಗೆ ತಲಾ 5,000 ರೂಪಾಯಿ (ಒಟ್ಟು 20,000) ಮತ್ತು ರೂ 6,000 ಮೌಲ್ಯದ ಆಹಾರ ಸಾಮಗ್ರಿಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಕಿನ್ಯ ಕೇಶವ ಶಿಶು ಮಂದಿರದ ನಾರಾಯಣ ಕಜೆ, ಹಿಂದೂ ಜಾಗರಣ ವೇದಿಕೆಯ ಪ್ರಕಾಶ್ ಕುಂಪಲ, ಕಿನ್ಯ ಬೆಳರಿಂಗೆ ಮಲರಾಯ ದೈವಸ್ಥಾನದ ಭಂಡಾರ ಮನೆಯ ರವಿ ಬೆಳರಿಂಗೆ, ಶ್ರೀ ಸಾಯಿ ಪರಿವಾರ್ ಟ್ರಸ್ಟ್ನ ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ಸತೀಶ್ ಭಟ್ನಗರ, ದೀಕ್ಷಿತ್ ಪೂಜಾರಿ, ರಾಜೇಶ್ ಮಡಿವಾಳ, ಜಗದೀಶ್ ಆಚಾರ್ಯ, ಸಂಪತ್, ಸಮಿತ್, ಧರ್ಮನಗರ, ತಿಲಕ್, ಜೀವನ್, ಮನಿಷ್, ಅಭಿಷೇಕ್ ದರ್ಮನಗರ, ಸಂಪತ್ ಪಿಲಾರ್ ಉಪಸ್ಥಿತರಿದ್ದರು.
