ಕಾಸರಗೋಡು : ಕಿರುಚಿತ್ರದ ಇತಿಹಾಸದಲ್ಲಿ ವಿಭಿನ್ನ ಪ್ರೇಮಕಥೆಯುಳ್ಳ ಏ.ಟಿ.ಎಮ್ ಎಂಬ ಕಿರುಚಿತ್ರದ ಪೂಜಾ ಮುಹೂರ್ತ ಕಾಸರಗೋಡು ಜಿಲ್ಲೆಯ ಪ್ರತಾಪನಗರ ಗಣೇಶ ಮಂದಿರದಲ್ಲಿ ಶ್ರೀ ಯಾದವ ಶರ್ಮಾ ನೀರ್ಚಾಲು ಇವರ ಪೌರೋಹಿತ್ಯದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಕಲಾವಿದರಾದ ರಾಧಾಕೃಷ್ಣ ಟೈಲರ್ ಕುಂಬ್ಳೆ, ಜಯರಾಮ ಆಚಾರ್ಯ ಹೊಸಂಗಡಿ, ವರ್ಷಾ ಪೆರ್ಲ, ಕಿರಣ್ ಆಚಾರ್ಯ ಪುತ್ತಿಗೆ, ವಿಜೇಶ್ ಪುತ್ತಿಗೆ, ಮೋಕ್ಷಿತ್ ಶೆಟ್ಟಿ, ನಿರ್ದೇಶಕರಾದ ವರುಣ್ ಕುಮಾರ್ ಹೆಚ್, ನಿರ್ಮಾಪಕರಾದ ತುಕಾರಾಮ ಆಚಾರ್ಯ ಬಾಯಾರು ಭಾಗವಹಿಸಿದರು.
ಕಾಸರಗೋಡು ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಚಲನಚಿತ್ರದ ಜೋಸೆಫ್ ಪಾತ್ರಧಾರಿ ಯೋಗೀಶ್ ಶೆಟ್ಟಿ ವರ್ಕಾಡಿ ಇವರು ಕ್ಯಾಮೆರಾ ಚಾಲನೆ ಮಾಡಿದರು. ತುಕಾರಾಮ ಆಚಾರ್ಯ ಬಾಯಾರು ಇವರ ಕಥೆ, ನಿರ್ಮಾಣದಲ್ಲಿ ಯುವ ನಿರ್ದೇಶಕ ವರುಣ್ ಕುಮಾರ್ ಹೆಚ್ ಇವರ ನಿರ್ದೇಶನದಲ್ಲಿ ತಯಾರಾಗುವ ಈ ಕಿರುಚಿತ್ರದ ಛಾಯಾಗ್ರಹಣ ಗೋಕುಲ್ ದಾಸ್ ಆಚಾರ್ಯ. ದೀಪ ಪ್ರಜ್ವಲನೆ ಗಣಪತಿ ಆಚಾರ್ಯ ಪಚ್ಛಂಬಳ ಬಂದ್ಯೋಡು. ಸಹನಿರ್ದೇಶಕರು ಶರತ್ ಕಿರಣ್ ಟೀ.
ಚಿತ್ರ ಮತ್ತು ವರದಿ : ದೀಪಕ್ ರಾಜ್ ಉಪ್ಪಳ
