ವರದಿ : ರತನ್ ಕುಮಾರ್ ಹೊಸಂಗಡಿ
ಪರಮ ಪೂಜ್ಯ ಒಡಿಯೂರು ಶ್ರೀಗಳಿಗೆ 60ನೇ ಷಷ್ಟ್ಯಬ್ದ | ಸೃಷ್ಟಿ ಕಲಾಭೂಮಿ ಬೆಂಗಳೂರು ಮತ್ತು ಕಾಸರಗೋಡು ಘಟಕದ ವತಿಯಿಂದ ಗೌರವಾರ್ಪಣೆ
August 12, 2021
0
ಉಪ್ಪಳ : ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಶ್ರೀ ಕ್ಷೇತ್ರ ಒಡಿಯೂರಿನ ಪೂಜ್ಯರಾದ ಶ್ರೀ ಗುರುದೇವಾನಂದ ಸ್ವಾಮೀಜಿಯವರ 60ನೇ ಷಷ್ಟ್ಯಬ್ದ ಪ್ರಯುಕ್ತ ಸೃಷ್ಟಿ ಕಲಾ ಭೂಮಿ ಬೆಂಗಳೂರು ಮತ್ತು ಕಾಸರಗೋಡು ಘಟಕದ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಪರಮ ಪೂಜ್ಯ ಸ್ವಾಮೀಜಿಯವನ್ನು ಭೇಟಿಯಾಗಿ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಸೃಷ್ಟಿ ಕಲಾಭೂಮಿ ಬೆಂಗಳೂರು ಹಾಗೂ ಕಾಸರಗೋಡು ಘಟಕದ ಸಂಸ್ಥಾಪಕರಾದ ಶ್ರೀ ಮಂಜುನಾಥ ಅಡಪ್ಪ ಶ್ರೀಗಳಿಗೆ ಫಲ ಪುಷ್ಪ ನೀಡಿ, ತುಳಸಿ ಮಾಲೆ ಹಾಕಿ, ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಾರ್ಪಣೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆಯ ಕಾಸರಗೋಡು ಜಿಲ್ಲಾ ಅಧ್ಯಕ್ಷರಾದ ಅಶ್ವಥ್ ಪೂಜಾರಿ ಲಾಲ್ಭಾಗ್, ಸೃಷ್ಟಿ ಕಲಾಭೂಮಿ ಬೆಂಗಳೂರು ಹಾಗೂ ಕಾಸರಗೋಡು ಘಟಕದ ಪ್ರಧಾನ ಸಂಚಾಲಕರಾದ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ದೀಪಕ್ ರಾಜ್ ಉಪ್ಪಳ ಉಪಸ್ಥಿತರಿದ್ದರು.
Tags
