ಕಾರ್ಕಳ : ವಿಜೇತ ವಿಶೇಷ ಶಾಲೆಯಲ್ಲಿ 2ನೇ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಮಾನ್ಯ ತಹಶೀಲ್ದಾರರಾದ ಶ್ರೀ ಪ್ರಕಾಶ್ ಎಸ್ ಮರಬಳ್ಳಿ ಯವರು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಜೇಶ್ ರಾವ್ ಮಾಜಿ ಗ್ರಾ.ಪ.ಅಧ್ಯಕ್ಷರು, ಶ್ರೀ ಗಿರೀಶ್ ರಾವ್ ಮೆಸ್ಕಾಂ ಅಕೌಂಟ್ಸ್ ಆಫೀಸರ್, ಶ್ರೀ ಹರೀಶ್ ಆಚಾರ್ಯ ಶೃಂಗಾರ್ ಜ್ಯುವೆಲ್ಲರ್ಸ್, ಶ್ರೀ ಕೆ ರಾಧಾಕೃಷ್ಣ ಶೆಟ್ಟಿ ದುರ್ಗಾ ವಿದ್ಯಾ ಸಂಘದ ಅಧ್ಯಕ್ಷರು, ನಕ್ರೆ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಪ್ರತೀಕ್ಷ ಶೆಟ್ಟಿ, ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ (ರಿ.) ನ ಸ್ಥಾಪಕರು ಡಾ. ಕಾಂತಿ ಹರೀಶ್, ಶಾಲಾ ಹಾಗೂ ಎ. ಪಿ.ಎಂ.ಸಿ ಅಧ್ಯಕ್ಷರು ಶ್ರೀ ರತ್ನಾಕರ್ ಅಮೀನ್, ಕೋಶಾಧಿಕಾರಿ ಸಿಯಾ ಸಂತೋಷ್ ನಾಯಕ್ ಉಪಸ್ಥಿತರಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿಗಳಾದ ಸಿ.ಕುಮುದಾವತಿ, ಸಿ.ಅನಿತಾ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿವರ್ಗ, ವಿಜೇತ ಶಾಲಾ ಮಕ್ಕಳು, ಸಿಬ್ಬಂದಿವರ್ಗ ಹಾಗೂ ಸ್ಥಳೀಯರು ಸುಮಾರು 225 ಜನ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದುಕೊಂಡರು.
