ಮಂಜೇಶ್ವರ:- ಆಂಜನೇಯ ಫ್ರೆಂಡ್ಸ್ ಕ್ಲಬ್ (ರಿ.)ಕಣ್ವತೀರ್ಥ. ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕ್ಲಬ್ಬಿನಲ್ಲಿ ನಡೆಯಿತು. 2021-22ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರುಗಳಾಗಿ ಗಣೇಶ್(ಅಪ್ಪಿ) ಹಾಗೂ ಹರೀಶ್ ಕೊಳಕೆ. ಅಧ್ಯಕ್ಷರಾಗಿ ಕಿರಣ್ ಕಣ್ವತೀರ್ಥ ಹಾಗೂ ಕಾರ್ಯದರ್ಶಿಗಳಾಗಿ ಧೀರಜ್ ಕಣ್ವತೀರ್ಥ ಪುನರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶರತ್ ಕಣ್ವತೀರ್ಥ. ಲೆಕ್ಕ ಪರಿಶೋಧಕರಾಗಿ ಅಶ್ವಿನ್ ಐಲ್ ಕಣ್ವತೀರ್ಥ. ಖಜಾಂಜಿಯಾಗಿ ವಿನೋದ್. ಕ್ರೀಡಾ ಕಾರ್ಯದರ್ಶಿಯಾಗಿ ಸೂರಜ್ ಕಣ್ವತೀರ್ಥ. ಕಲಾ ಕಾರ್ಯದರ್ಶಿಗಳಾಗಿ ಚಂದ್ರಹಾಸ್ ಮುಗುಲ್ಯ ರಾಮಾಡಿ ಹಾಗೂ ಹರ್ಷೇಂದ್ರ ಕಣ್ವತೀರ್ಥ. ಸಂಘಟನಾ ಕಾರ್ಯದರ್ಶಿಗಳಾಗಿ ತರಣ್ (ಸೋನು)ಮತ್ತು ಸಂದೀಪ್ ಶೆಟ್ಟಿಗಾರ್ ಹಾಗೂ ಕಮಿಟಿ ಸದಸ್ಯರನ್ನು ಪುನರ್ ರಚಿಸಲಾಯಿತು. ಲೆಕ್ಕ ಪರಿಶೋಧಕರಾದ ಅಶ್ವನ್ರವರು ವಾರ್ಷಿಕ ಆಯ-ವ್ಯಯ ಮಂಡಿಸಿದರು. ನಂತರ ವರ್ತಮಾನದ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.
ಆಂಜನೇಯ ಫ್ರೆಂಡ್ಸ್ ಕ್ಲಬ್ (ರಿ.)ಕಣ್ವತೀರ್ಥ ವಾರ್ಷಿಕ ಮಹಾಸಭೆ | ನೂತನ ಸಮಿತಿ ರೂಪೀಕರಣ
August 05, 2021
0
Tags
