ಮಂಜೇಶ್ವರ:- ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಮಧ್ಯಾಹ್ನದ ಗಂಜಿ ಊಟ ಕಾರ್ಮಿಕರು ಜಂಟಿ ಯಾಗಿ ದೈಗೊಳಿ ಅಂಚೆ ಕಚೇರಿ ಮುಂಬಾಗದಲ್ಲಿ ಇಂದು ಅಪರಾಹ್ನ ಪ್ರತಿಭಟಿಸಿದರು.ಕಾರ್ಮಿಕರ ಆರೋಗ್ಯದ ಭದ್ರತೆ, ಕೆಲಸದ ಭದ್ರತೆ, ಈ ಕಾರ್ಮಿಕರನ್ನು ಕೋವಿಡ್ ಮುಂಚೂಣಿ ಕಾರ್ಮಿಕರಾಗಿ ನೇಮಿಸಬೇಕು, ಜಿಡಿಪಿಯ 6% ಹಣವನ್ನು ಆರೋಗ್ಯ ರಂಗಕ್ಕೆ ಮೀಸಲು ಇಡಬೇಕು, ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿ ಮರಣ ಹೊಂದಿದವರಿಗೆ 50 ಲಕ್ಷ ನೀಡಬೇಕು, ರಿಸ್ಕ್ ಅಳವೆನ್ಸ್ 10000 ನೀಡಬೇಕು, ಪೆನ್ಸನ್ 10000 ಆಗಿ ಹೆಚ್ಚಿಸಬೇಕು. ಕೋವಿಡ್ ಬಾಧಿತರಾಗಿ ಮರಣ ಹೊಂದಿದವರಿಗೆ 10 ಲಕ್ಷ ನೀಡಬೇಕು, ತೆರಿಗೆ ರಹಿತ ಎಲ್ಲರಿಗೂ ತಿಂಗಳಿಗೆ 10 k.g ಅಕ್ಕಿ ಹಾಗೂ 7,500 ನಂತೆ ನೀಡಬೇಕು, ಪೆಟ್ರೋಲ್, ಡಿಸೇಲ್ ಅಡುಗೆ ಅನಿಲದ ಬೆಲೆ ಹೇರಿಕೆ ತಡೆಯಬೇಕು, ಕೃಷಿ ಮಸೂದೆ ಹಿಂತೆಗೆಯಬೇಕು. ಎಂಬ ಬೇಡಿಕೆಯೊಂದಿಗೆ ಸಿ.ಐ.ಟಿ.ಯು ಕಾರ್ಮಿಕರು ದೈಗೊಳಿ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸಿ.ಐ.ಟಿ.ಯು ಮಂಜೇಶ್ವರ ಏರಿಯ ಸಮಿತಿ ಅಧ್ಯಕ್ಷ ಪ್ರಶಾಂತ್ ಕನಿಲ ಉದ್ಘಾಟಿಸಿ, ಮಾತನಾಡಿದರು. ಆಶಾ ಕಾರ್ಯಕರ್ತೆ ಶಾರದ ಅಧ್ಯಕ್ಷತೆ ವಹಿಸಿದರು.
ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಸುಳ್ಯಮೆ, ಶ್ರೀಮತಿ ಗೀತಾ ಸಾಮನಿ, ಮೊದಲಾದವರು ಮಾತನಾಡಿದರು. ಜಯ ಶ್ರೀ .ಎಂ ಧನ್ಯವಾದ ವಿತ್ತರು. ಶಾರದಾ .ಎಸ್ ಸ್ವಾಗತಿಸಿದರು.
