ನಾಪೋಕ್ಲು : ನಾಪೋಕ್ಲು ಗ್ರಾಮ ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಪೋಷಣ್ ಮಾಸಾಚರಣೆ ಮತ್ತು ಮಾತೃವಂದನಾ ಸಪ್ತಾಹ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಪೋಕ್ಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪಾರ್ವತಿಯವರು ವಹಿಸಿದರು. ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಆರುಂಧತಿಯವರು ಮಾತನಾಡಿ ಗರ್ಭಿಣಿಯರಲ್ಲಿ ಪೌಷ್ಠಿಕಾಂಶಯುಕ್ತ ಆಹಾರವನ್ನು ಮತ್ತು ಸ್ಥಳೀಯವಾಗಿಯೇ ಸಿಗುವಂತಹ ಆಹಾರವನ್ನು ಬಳಸಿ ಉತ್ತಮವಾದ ಆರೋಗ್ಯವಾಗಿದ್ದಾಗ ಶಿಶುಮರಣವನ್ನು, ಕಡಿಮೆ ತೂಕದ ಜನನವನ್ನು ತಪ್ಪಿಸಿ ಸದೃಢವಾದ ಮಗು ಜನಿಸಲು ಸಹಾಯವಾಗುತ್ತದೆ. ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳಿಂದ ಪಡೆದುಕೊಳ್ಳುವಂತೆ ತಿಳಿಸಿದರು.
ಮೇಲ್ವಿಚಾರಕಿ ಶ್ರೀಮತಿ ಶೀಲಾರವರು ಮಾತೃವಂದನಾ ಯೋಜನೆಯನ್ನು ಮೊದಲ ಗರ್ಭಿಣಿಯರು ಅರ್ಹ ಫಲಾನುಭವಿಗಳಾಗಿದ್ದು ಇಲಾಖೆಯು 3ಕಂತುಗಳಾಗಿ 5000 ಮೊತ್ತವನ್ನು ಇಲಾಖೆ ಗರ್ಭಿಣಿಯ ನೇರ ಖಾತೆಗೆ ಬರುವುದಾಗಿದೆ. ಇದಕ್ಕೆ ಬೇಕಾದ ದಾಖಲೆಗಳನ್ನು ಅಂಗನವಾಡಿ ಕೇಂದ್ರದ ಕಾರ್ಯಕರ್ತರಿಗೆ ತಲುಪಿಸಬೇಕು ಎಂದು ತಿಳಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಶ್ರೀಮತಿ ಚೊಂದಕ್ಕಿಯವರು ಮಾತನಾಡಿ ಸೆಪ್ಟೆಂಬರ್ 1ರಿಂದ 30ರವರೆಗೆ ಪೌಷ್ಟಿಕ ಮಾಹಿತಿಗಳನ್ನು ನಮ್ಮ ಜನತೆಗೆ ತಿಳಿಸಿದಾಗ ಅಪೌಷ್ಟಿಕತೆ ಕಂಡು ಬರುವುದಿಲ್ಲ. ಆದುದರಿಂದ ಎಲ್ಲಾ ಅಂಗನವಾಡಿ ಕೇಂದ್ರದ ಸಭೆಗಳಲ್ಲಿ ಮಾಹಿತಿ ತಿಳಿಸಬೇಕು ಎಂದರು. ಅಧ್ಯಕರು ಮಾತನಾಡಿ ಪೋಷಣ್ ಕಾರ್ಯಕ್ರಮದಿಂದ ಅನೇಕ ಮಾಹಿತಿಗಳು ವ್ಯಾಪ್ತಿಯ ಜನರಿಗೆ ಸಿಗುವಂತೆ ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು ಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಕುರೈಸಿ, ಪಂಚಾಯತ್ ಸದಸ್ಯರು, ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗದವರು, ಮಹಿಳಾ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ಆಶಾಲತರವರು ಸ್ವಾಗತಿಸಿ, ನಿರೂಪಿಸಿದರು. ಶ್ರೀಮತಿ ಪವಿತ್ರ ವಂದಿಸಿದರು.