ಮಾಹಿತಿ : ಪ್ರಶಾಂತ್ ಎ (ಮುಖ್ಯ ಶಿಕ್ಷಕರು)
ನೂತನ ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರೂಪೀಕರಣ | ಗೌರವಾರ್ಪಣೆ
September 01, 2021
0
ಕಾಶಿಪಟ್ಣ : ಕೇಳದಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನೂತನ ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಕಾಶ್ ಹಾಗೂ ಉಪಾಧ್ಯಕ್ಷೆಯಾಗಿ ಶ್ರೀಮತಿ ಚಿತ್ರಾ ಇವರು ಆಯ್ಕೆಯಾದರು. ಸದಸ್ಯರುಗಳಾಗಿ ಸಂಜೀವ, ತೆರೇಸಾ, ವಿನೋದ್, ಹಸನಬ್ಬ, ಸುಜಾತ, ಮುಮ್ತಾಜ್, ಹರೀಶ್, ಗಣೇಶ್, ವಸಂತ ಪೂಜಾರಿ, ಶುಭಕರ, ವಸಂತ, ಸುಮಲತಾ, ಸವಿತಾ, ಶೈಲಜಾ, ಜ್ಯೋತಿ ಮತ್ತು ಮಂಜುಳಾ ಇವರು ಆಯ್ಕೆಯಾದರು. ಹಾಗೆಯೇ ಪದನಿಮಿತ್ತ ಸದಸ್ಯರುಗಳಾಗಿ ಶಾಲಾ ಮುಖ್ಯ ಶಿಕ್ಷಕರಾದ ಪ್ರಶಾಂತ್. ಎ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲಲಿತಾ, ಆರೋಗ್ಯ ಕಾರ್ಯಕರ್ತೆ ಸೌಮ್ಯ, ನಾಮನಿರ್ದೇಶಿತ ಸದಸ್ಯರುಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್, ಶಿಕ್ಷಕ ಪ್ರತಿನಿಧಿಯಾಗಿ ಜಯಂತಿ ಬಾಯಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಯಾಗಿ ಸಾಕಿರ್ ಆಯ್ಕೆಯಾದರು. ಇದೇ ಸಂದರ್ಭದಲ್ಲಿ ಸ್ಟ್ಯಾನಿ ಪಿಂಟೋ ನಿವೃತ್ತ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆ ಮಂಜುಳಾ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ, ಶಿಕ್ಷಕ ವರ್ಗದವರು ಹಾಗೂ ಪೋಷಕ ವರ್ಗದವರು ಉಪಸ್ಥಿತರಿದ್ದರು.
Tags
