ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ:- ಸುನ್ನಿ ಯುವಜನ ಸಂಘ ಮಂಜೇಶ್ವರಂ ಝೋನ್ ಇದರ ವತಿಯಿಂದ ಕಡಂಬಾರ್ ಸರಕಾರಿ ಶಾಲೆಯಲ್ಲಿ ರಕ್ತದಾನ ಶಿಬಿರ ಇಂದು ಬೆಳಗ್ಗೆ ನಡೆಯಿತು. ಕಾರ್ಯಕ್ರಮವನ್ನು ಮುಸ್ತಫಾ ಕಡಂಬಾರ್ ಉದ್ಘಾಟಿಸಿದರು. ರಕ್ತದಾನದ ಉಧ್ಘಾಟನೆಯನ್ನು ಎಸ್. ವೈ. ಎಸ್ ಝೋನ್ ಅಧ್ಯಕ್ಷರಾದ ಅಝೀಝ್ ಸಖಾಫಿ ಮಚ್ಚಂಪಾಡಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಶುಭಾಷಯ ಕೋರಿದರು. ಕಾರ್ಯಕ್ರಮದಲ್ಲಿ ಎಸ್. ವೈ. ಎಸ್ ಝೋನ್ ಪ್ರಧಾನ ಕಾರ್ಯದರ್ಶಿ ಜಬ್ಬಾರ್ ಸಖಾಫಿ ಪಾತೂರ್, ಸಿದ್ದೀಕ್ ಕೊಳ್ಯೂರು, ಮೊಯ್ದಿನ್ ಆಶ್ರಫ್ ಸಹದಿ, ಫಾರೂಖ್ ಪುರುಷಂಗೊಡಿ, ಅಬ್ದುಲ್ ರಹ್ಮಾನ್ ಸಖಾಫಿ, ಸಿದ್ದೀಕ್ ಪುರುಷಂಗೊಡಿ, ಅಬ್ಬಾಸ್ ಕುಳಬೈಲ್ ಮೊದಲಾದವರು ಭಾಗವಹಿಸಿದರು. ಈ ವೇಳೆ ಹಲವಾರು ಮಂದಿ ಕಾರ್ಯಕರ್ತರು ರಕ್ತದಾನ ಮಾಡಿದರು.
ಸುನ್ನಿ ಯುವಜನ ಸಂಘ ಮಂಜೇಶ್ವರ ಜೋನ್ ವತಿಯಿಂದ ಕಡಂಬಾರು ಶಾಲೆಯಲ್ಲಿ ರಕ್ತದಾನ ಶಿಬಿರ.
October 10, 2021
0
Tags

