ಮಂಜುಶ್ರೀ ನ್ಯೂಸ್ ಮಂಜೇಶ್ವರ
ನಮ್ಮ ಪ್ರತಿನಿಧಿ ವರದಿ
ಸಭೆಯ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಡಿ.ಎಂ.ಕೆ ವಹಿಸಿದ್ದರು.
ಈ ವೇಳೆ ಕಾಸರಗೋಡು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಕೆ ಪೈಸಲ್ ರವರನ್ನ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಡಿ.ಸಿ.ಸಿ ಪ್ರಧಾನ ಕಾರ್ಯದರ್ಶಿಯಾದ ಸೋಮಶೇಖರ್ ಜೆ.ಎಸ್, ಸುಂದರ ಆರಿಕ್ಕಾಡಿ, ಸಾಜಿದ್ ಮೌವ್ವಲ್, ಮಂಡಲ ಅಧ್ಯಕ್ಷರುಗಳಾದ ಸಂಕಬೈಲ್ ಸತೀಶ್ ಅಡಪ್ಪ, ಉಮ್ಮರ್ ಶಾಫಿ ಮಾಸ್ತರ್, ಸುಕುಮಾರ ಶೆಟ್ಟಿ, ಬ್ಲಾಕ್ ಪಧಾಧಿಕಾರಿಗಳಾದ ಪಿ. ಸೋಮಪ್ಪ, ಐ.ಆರ್.ಡಿ.ಪಿ ಇಬ್ರಾಹಿಂ, ಗುರುವಪ್ಪ ಮಂಜೇಶ್ವರ, ಅಜೀಜ್ ಕಲ್ಲೂರು, ಮೊಹಮ್ಮದ್ ಮಜಾಲ್, ಮೊಹಮ್ಮದ್ ಬೆಜ್ಜ, ಚಂದ್ರಶೇಖರ ಶೆಟ್ಟಿ ಬೆಜ್ಜ, ಇಕ್ಬಾಲ್ ಕಳಿಯೂರು, ಬಾಬು ಬಂದ್ಯೋಡ್, ಆರಿಫ್ ಮಚ್ಚ0ಪಾಡಿ, ಓಂ ಕೃಷ್ಣ ಕಣ್ವತೀರ್ಥ, ಗಣೇಶ್ ಪಾವೂರು, ದಿವಾಕರ ಎಸ್.ಜೆ, ಝಕಾರಿಯಾ ಶಾಲಿಮಾರ್, ಅಲ್ಮೇಡಾ ಡಿ' ಸೋಜಾ, ಇಬ್ರಾಹಿಂ ಕುಂತೂರು, ಜೂಲಿಯನ ಡಿ' ಸೋಜಾ, ನಾರಾಯಣ ಶೆಟ್ಟಿ ಪಾವೂರು, ಉಮ್ಮರ್ ಬೊರ್ಕಳ, ಹಮೀದ್ ಕೋಡಿಯಡ್ಕ, ಸೀತಾ ಡಿ, ಫ್ರಾನ್ಸಿಸ್ ಡಿ'ಸೋಜಾ, ಶಾಂತಾ ಆರ್. ನಾಯ್ಕ್, ವೇದಾವತಿ ಕೆ, ಖಲೀಲ್ ಬಜಾಲ್, ಮನ್ಸೂರು ಬಿ.ಎಂ, ಯೂತ್ ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಸಮಿತಿ ಅಧ್ಯಕ್ಷ ಇರ್ಷಾದ್ ಮಂಜೇಶ್ವರ, ಯೂತ್ ಕಾಂಗ್ರೆಸ್ ನ ಎಲ್ಲಾ ಮಂಡಲ ಅಧ್ಯಕ್ಷರುಗಳು, ಕಾಂಗ್ರೆಸ್ ನ ಪೋಷಕ ಸಂಘಟನೆಯ ಪಧಾಧಿಕಾರಿಗಳು, ಹಾಗೂ ಕಾರ್ಯಕರ್ತರು ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿಯ ಸಭೆಯನ್ನು ಈ ತಿಂಗಳ 17 ರಂದು ಬೆಳಗ್ಗೆ 10 ಕ್ಕೆ ಹೊಸಂಗಡಿ ಗೇಟ್ ವೇ ಸಭಾಂಗಣದಲ್ಲಿಯೂ, ವರ್ಕಾಡಿ ಮಂಡಲ ಕಮಿಟಿ ಸಭೆಯನ್ನು 18 ರಂದು ಅಪರಾಹ್ನ 3 ಗಂಟೆಗೆ ಸುಂಕದಕಟ್ಟೆ ವಿಶ್ವ ಪ್ರಭಾ ಹಾಲ್ ನಲ್ಲಿಯೂ, ಮಿಂಜ ಮಂಡಲ ಕಮಿಟಿ ಸಭೆ 20 ರಂದು ಬೆಳಗ್ಗೆ 10 ಕ್ಕೆ ಮಿಯಪದವಿನಲ್ಲಿಯೂ, ಮಂಗಲ್ಪಾಡಿ ಮಂಡಲ ಕಮಿಟಿ ಸಭೆ 21 ಕ್ಕೆ ಅಪರಾಹ್ನ 3 ಗಂಟೆಗೆ ಕೈಕಂಬದ ಪಂಚಮಿ ಸಭಾಂಗಣದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ವೇಳೆ ಇತ್ತೀಚೆಗೆ ಅಗಲಿದ ಕಾಂಗ್ರೆಸ್ ನೇತಾರ ಪಿ.ಎ ರಹಿಮಾನ್ ಮಂಜೇಶ್ವರ ಅವರಿಗೆ ಮೌನ ಪ್ರಾರ್ಥನೆಯೊಂದಿಗೆ ಸಂತಾಪ ಸೂಚಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಸೀಗಂದಡಿ ಸ್ವಾಗತಿಸಿ, ನಾಗೇಶ್ ಮಂಜೇಶ್ವರ ವಂದಿಸಿ, ದಿವಾಕರ್ ಎಸ್. ಜೆ ವಂದೇ ಮಾತರಂ ಹಾಡಿ, ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಕೋವಿಡ್ ನಿಯಮಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಭಾಂಗಣವು ಕಾರ್ಯಕರ್ತರಿಂದ ತುಂಬಿ ತುಳುಕಿತ್ತು.
ವರದಿ ಮತ್ತು ಚಿತ್ರಗಳು : ರತನ್ ಕುಮಾರ್ ಹೊಸಂಗಡಿ
