ವರ್ಕಾಡಿ : 50 ವರ್ಷಗಳಿಂದ ವರ್ಕಾಡಿ ಬೇಕರಿ ಜಂಕ್ಷನ್ ನಲ್ಲಿ ವ್ಯಾಪಾರ ನಡೆಸುತ್ತಿದ್ದ ವಿಕ್ಟರ್ ಡಿ.ಸೋಜ ಅಲ್ಪಕಾಲದ ಅಸೌಖ್ಯದಿಂದ (84) ಅ.27ರಂದು ಬುಧವಾರ ಬೆಳಿಗ್ಗೆ ನಮ್ಮನ್ನಗಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಇವರು ವರ್ಕಾಡಿ ಪ್ರದೇಶದಲ್ಲಿ ಪ್ರಥಮ ಬಾರಿಗೆ ವಿಜಯ ಬೇಕರಿಯನ್ನು ಪ್ರಾರಂಭಿಸಿದ್ದು, ಇದರಿಂದಾಗಿ ಈ ಪ್ರದೇಶ ಈಗಲೂ ಬೇಕರಿ ಜಂಕ್ಷನ್ ಎಂದೇ ಕರೆಯಲ್ಪಡುತ್ತಿವೆ. ಮೃತರು ಪುತ್ರರಾದ ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ, ಕಾಂಗ್ರೆಸ್ ಮುಖಂಡ ರಾಜೇಶ್ ಡಿ ಸೋಜ , ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗಿಯಾಗಿರುವ ಸ್ಟೀವನ್ ಡಿ.ಸೋಜ, ಪುತ್ರಿ ಹೆಲೆನ್ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ.
ವರ್ಕಾಡಿಯ ಹಿರಿಯ ವ್ಯಾಪಾರಿ ವಿಕ್ಟರ್ ಡಿ.ಸೋಜ ಇನ್ನಿಲ್ಲ
October 27, 2021
0

Tags