ಮೀಯಪದವು:- ಕೊವಿಡ್ ವ್ಯಾಕ್ಸಿನೆಷನ್ ಭಾರತದಲ್ಲಿ 100 ಕೋಟಿ ಜನರಿಗೆ ತಲಪಿರುವ ಹಿನ್ನಲೆಯಲ್ಲಿ ಬಿಜೆಪಿ ಮಿಂಜ ಪಂಚಾಯತ್ ಸಮಿತಿ ವತಿಯಿಂದ ಆರೋಗ್ಯ ಕೇಂದ್ರ ಮಿಂಜ ಗ್ರಾಮ ಪಂಚಾಯತ್ ನ ವೈದ್ಯರಾದ ಪ್ರಭಾಕರ್ ರೈ ಮತ್ತು ಸಿಬ್ಬಂದಿ ವರ್ಗದವರನ್ನು ಬಿಜೆಪಿ ವತಿಯಿಂದ ಇಂದು ಅಪರಾಹ್ನ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಮಿಂಜ ಪಂಚಾಯತ್ ಅಧ್ಯಕ್ಷರಾದ ಕೃಷ್ಣ ಬೆಜ್ಜ ವಹಿಸಿದರು. ಕಾರ್ಯಕ್ರಮವನ್ನು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷರು ಮಣಿಕಂಠ ರೈ ಉದ್ಘಾತಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮಿಂಜ ಪ್ರಧಾನ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ರಂಜಿತ್ ಶೆಟ್ಟಿ ಹಾಗೂ ಜನಪ್ರತಿನಿಧಿಗಳಾದ ನಾರಾಯಣ ತುಂಗಾ, ಶ್ರೀಮತಿ ಜ್ಯೋತಿ .ಪಿ ರೈ, ಶ್ರೀಮತಿ ಕುಸುಮ ಮೋಹನ, ಚಂದ್ರಶೇಖರ್ ಕೋಡಿ, ಶ್ರೀಮತಿ ಆಶಾಲತಾ ಬಿ.ಎಂ, ವಿನೋದ್. ಜಿ, ಮಂಜೇಶ್ವರ ಮಂಡಲ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪೂಜಾರಿ ಕಡಂಬಾರು ಭಂಡಾರಮನೆ, ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಸಂತೋಷ್ ದೈಗೋಳಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಕೆ.ವಿ ರಾಧಾಕೃಷ್ಣ, ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಸಮಿತಿ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್ ಪಜ್ವ, ಚಂದ್ರಹಾಸ ಬೆಜ್ಜ, ಪಕ್ಷದ ಹಿರಿಯ ನೇತಾರರಾದ ಕೆ. ನಾರಾಯಣ ನಾಯ್ಕ್ ನಡುಹಿತ್ಲು ಕುಳೂರು, ಜೋಕಿ ಮೊಂತೇರೋ, ರಾಜೇಶ್ ಭಟ್, ಕೃಷ್ಣ ನಾವಡ, ಕ್ಯಾಂಪ್ಕೋ ನಿರ್ದೇಶಕರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಚಂದ್ರಹಾಸ ಆಳ್ವ ಕೊಡ್ದೆ, ಬಿ.ವಿ ಸುರೇಶ್ ಸಸಿಗೋಳಿ, ಮೋಹನ್ ದಾಸ್, ಮಹೇಶ್ ಬೆಜ್ಜ, ಶಂಕರನಾರಾಯಣ ಭಟ್ ಮುಂದಿಲ ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರ ಸರಕಾರದ ಕೋವಿಡ್ ವ್ಯಾಕ್ಸಿನ್ ನೂರು ಕೋಟಿ ಜನತೆಗೆ ವಿತರಣೆ | ಬಿಜೆಪಿಯಿಂದ ಕೃತಜ್ಞತಾ ಪೂರ್ವಕ ಸನ್ಮಾನ
November 01, 2021
0
Tags
