ಮಂಗಳೂರು : ಆಹಾರ ಸಂಸ್ಕರಣ ಹಾಗೂ ಗುಣಮಟ್ಟ ಪ್ರಾಧಿಕಾರವು ಆಹಾರ ಉತ್ಪಾದಕರು, ಮಾರಾಟಗಾರರು, ಸಂಸ್ಕರಣ ಉದ್ಯಮದವರು ಸೇರಿದಂತೆ ಎಲ್ಲಾ ರೀತಿಯ ಆಹಾರ ಉದ್ಯಮದ ವ್ಯಾಪಾರಸ್ಥರಿಗೆ ಫಾಸ್ಟಾಕ್ ತರಬೇತಿ ಮತ್ತು ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಆಹಾರ ಸೇವೆಗಳ ಗುಣಮಟ್ಟದ ಉದ್ದೇಶಗಳನ್ನು ತಿಳಿಸಿಕೊಡಲು ಹಾಗೂ ಸ್ವಚ್ಛತಾ ಕಾಳಜಿಯ ಉತ್ತೇಜನಕ್ಕಾಗಿ ಆಹಾರ ಉದ್ಯಮದ ಪ್ರತಿಯೊಬ್ಬ ವ್ಯಾಪಾರಸ್ಥರು ಈ ತರಬೇತಿಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ. ಎಲ್ಲಾ ಆಹಾರ ವಹಿವಾಟು ಉದ್ದಿಮೆದಾರರು ತರಬೇತಿಯೊಂದಿಗೆ ಎಫ್ಎಸ್ಎಸ್ಐ ಪರವಾನಗಿ ಅಥವಾ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಸೆಕ್ಷನ್ 63 ಪ್ರಕಾರ 5 ಲಕ್ಷದ ವರೆಗೆ ದಂಡ ಮತ್ತು 6 ತಿಂಗಳ ವರೆಗೆ ಕಾರಾಗೃಹ ವಾಸ ಮತ್ತು ನ್ಯಾಯಾಲಯದಲ್ಲಿ ದಾವೆ ಹೂಡಲು ಕಾನೂನಿನಲ್ಲಿ ಅವಾಶವಿದೆ. ಫಾಸ್ಟೆಕ್ ತರಬೇತಿಯನ್ನು ಎಲ್ಲಾ ಆಹಾರ ವಹಿವಾಟುದಾರರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರವು ಸರಕಾರದ ಆದೇಶದಂತೆ ಬಾಹ್ಯ ಮೂಲ ಸಂಸ್ಥೆಯಾದ ಬೆಂಗಳೂರಿನ M/S Career Crest Consultancy ಗೆ ವಹಿಸಿಕೊಟ್ಟಿದ್ದು ಆನ್ಲೈನ್/ಆಫ್ಲೈನ್ ಮುಖಾಂತರ ನಿಗದಿತ ಶುಲ್ಕದೊಂದಿಗೆ ಪಾವತಿಸಿ ಸಂಸ್ಥೆ ನಿಗದಿತ ಪಡಿಸಿರುವ ದಿನದಂದು ತರಬೇತಿಯಲ್ಲಿ ಭಾಗವಹಿಸಿ ಪ್ರಮಾಣಪತ್ರ ಪಡೆಯಬೇಕೆಂದು ಆಹಾರ ಸುರಕ್ಷತಾ ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿ ಪ್ರಕಟಣೆಯಲ್ಲಿ ತಿಳಸಿದ್ದಾರೆ.
ಆಹಾರ ಉತ್ಪಾದಕರು, ಮಾರಾಟಗಾರರು, ಸಂಸ್ಕರಣ ಉದ್ಯಮದವರು ಫಾಸ್ಟೆಕ್ ತರಬೇತಿ ಪಡೆಯಲು ಸೂಚನೆ
November 13, 2021
0
Tags
