ಮಂಜೇಶ್ವರ:- ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ 45 ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವಕ್ಕೆ ವೈಭವದ ಚಾಲನೆ ಇಂದು ಬೆಳಗ್ಗೆ ನಡೆಯಿತು.
ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷರಾದ ಪದ್ಮನಾಭ ಕಡಪ್ಪರರವರು ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು.
ಈ ವೇಳೆ ಕ್ಷೇತ್ರದ ಗುರುಸ್ವಾಮಿ ಉದಯ ಪಾವಳ, ಕ್ಷೇತ್ರದ ಪ್ರಧಾನ ಅರ್ಚಕರಾದ ತಿರುಮಲೇಶ ಆಚಾರ್ಯ, ಕೋಶಾಧಿಕಾರಿ:- ರಮೇಶ್ ಬಿ.ಎಂ ಕಟ್ಟೆಬಜಾರ್, ಸೇರಿದಂತೆ ಕ್ಷೇತ್ರದ ಅಯ್ಯಪ್ಪ ವೃತಧಾರಿಗಳು ಉಪಸ್ಥಿತರಿದ್ದರು.
ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ನಡಿಬೈಲು ಬ್ರಹ್ಮ ಶ್ರೀ ಶಂಕರನಾರಾಯಣ ಭಟ್ ಇವರ ನೇತೃತ್ವದಲ್ಲಿ ಬೆಳಗ್ಗೆ ನಿತ್ಯಪೂಜೆ, ಗಣಹೋಮ, ನಡೆಯಿತು. ಬಳಿಕ ಸ್ಥಳೀಯ ಭಕ್ತರಿಂದ ಭಜನೆ, ಶ್ರೀ ಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ 6.30 ಕ್ಕೆ ಶ್ರೀ ಅಯ್ಯಪ್ಪ ಘೋಷಯಾತ್ರೆಯು ವಾಮಂಜೂರು ಶ್ರೀ ಶಾಸ್ತವೇಶ್ವರ ದೇವಸ್ಥಾನದಿಂದ ಹೊರಟು ವಿವಿಧ ದೇವಸ್ಥಾನ, ಮಠ, ಮಂದಿರಗಳ ಮೂಲಕ ಸಾಗಿ ಶ್ರೀ ಕ್ಷೇತ್ರಕ್ಕೆ ತಲುಪಲಿದೆ. ಬಳಿಕ ಶ್ರೀ ಅಯ್ಯಪ್ಪ ಸ್ವಾಮಿಗೆ ಪಡಿಪೂಜೆ, ಶ್ರೀ ಅಯ್ಯಪ್ಪ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
