ಉಪ್ಪಳ: ಶ್ರೀ ಚೌಡಿ ಚಾಮುಂಡೇಶ್ವರಿ ಕ್ಷೇತ್ರ ಅಂಬಾರ್,ಕೃಷ್ಣ ನಗರ ಇಲ್ಲಿ ಡಿಸಂಬರ್ 26 ರಂದು ಜರಗಲಿರುವ ಶ್ರೀ ಚಾಮುಂಡಿ ಗುಳಿಗ ದೈವದ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಅರಸು ಮಂಜಿಸ್ನಾರ್ ಉದ್ಯಾವರ ಮಾಡದ ಅಣ್ಣ ದೈವದ ಪಾತ್ರಿ ರಾಜು ಬೆಲ್ಚಪ್ಪಾಡ ಇವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ಬಾಬು ಪಚ್ಲಂಪಾರೆ,ಸೇವಾ ರತ್ನ ಬಾಸ್ಕರ ಉಪ್ಪಳ, ಧಾರ್ಮಿಕ ಮುಂದಾಳುಗಳಾದ ಹರೀಶ್ ಶೆಟ್ಟಿ ಮಾಡ,ಅನಿಲ್ ಕುಮಾರ್ ತೊಕ್ಕೊಟ್ಟು,ಐತಪ್ಪ ಮಂಜೇಶ್ವರ, ಪ್ರೇಮನಾಥ ಮಂಗಲ್ಪಾಡಿ, ರಾಮ ಮಂಗಲ್ಪಾಡಿ, ಬಾಬು ಮಂಗಲ್ಪಾಡಿ, ಸಂತೋಷ್ ಬೇಕೂರು,ಮುರುಗೇಶ್ ಪಚ್ಲಂಪಾರೆ,ಕೊರಗಪ್ಪ ಗುವೇದಪಡ್ಪು ಮೊದಲಾದವರು ಉಪಸ್ಥಿತರಿದ್ದರು. ಪಂಡಿತ್ ವಿಜಯ್ ಕುಮಾರ್ ಭಗವತಿ ಉಪ್ಪಳ ಸ್ವಾಗತಿಸಿ, ವಿಶ್ವಾಸ್ ಮಂಗಲ್ಪಾಡಿ ವಂದಿಸಿದರು. ಸುರೇಶ್ ಕುಮಾರ್ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
