ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ ಬ್ರಹ್ಮಕಲಶೋತ್ಸವ | ಆಮಂತ್ರಣ ಪತ್ರಿಕೆ ಬಿಡುಗಡೆ
January 15, 2022
0
ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು ಫೆಬ್ರವರಿ 16 ರಿಂದ ಮೊದಲ್ಗೊಂಡು 20 ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ನಿನ್ನೆ ಕ್ಷೇತ್ರದಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ಕೆ. ಉಮೇಶ ತಂತ್ರಿ ಮಂಗಳೂರು ಬಿಡುಗಡೆಗೊಳಿಸಿದರು. ಕ್ಷೇತ್ರ ಮೊಕ್ತೇಸರರಾದ ಬತ್ತೇರಿ ಪದ್ಮನಾಭ ಆಚಾರ್ಯ ಪ್ರತಾಪನಗರ, ಎಂ. ವೆಂಕಟ್ರಮಣ ಆಚಾರ್ಯ ಮುಳಿಗದ್ದೆ, ಹಾಗೂ ಯು. ಅಶೋಕ ಆಚಾರ್ಯ ಉದ್ಯಾವರ ಇವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಲಾಯಿತು. ಈ ವೇಳೆ ಕ್ಷೇತ್ರದ ಪ್ರಧಾನ ಅರ್ಚಕ ಬ್ರಹ್ಮಶ್ರೀ ಪುರೋಹಿತ ಪ್ರಕಾಶ್ಚಂದ್ರ ಶ್ರೌತಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಎಂ. ಗಂಗಾಧರ ಆಚಾರ್ಯ ಕೊಂಡೆವೂರು, ಗೌರವ ಕಾರ್ಯದರ್ಶಿ ಎಸ್. ಭಾಸ್ಕರ ಆಚಾರ್ಯ ಪ್ರತಾಪನಗರ, ಪ್ರಧಾನ ಕಾರ್ಯದರ್ಶಿ ಕೆ. ನಾಗರಾಜ ಆಚಾರ್ಯ ಕಾಸರಗೋಡು, ಕೋಶಾಧಿಕಾರಿ ಉಳುವಾರು ವೆಂಕಟ್ರಮಣ ಆಚಾರ್ಯ, ಹಾಗೂ ಕ್ಷೇತ್ರದ ಅಂಗ ಸಂಸ್ಥೆಗಳಾದ ಓಜ ಸಾಹಿತ್ಯ ಕೂಟ, ಶ್ರೀ ಕಾಳಿಕಾ ಪರಮೇಶ್ವರಿ ವಿಶ್ವಕರ್ಮ ಮಹಿಳಾ ಸಂಘ, ಶ್ರೀ ಗುರುಸೇವಾ ಪರಿಷತ್ ಮಂಜೇಶ್ವರ ಇದರ ಪದಾಧಿಕಾರಿಗಳು, ಹಾಗೂ ಸದಸ್ಯರು ಉಪಸ್ಥಿತರಿದ್ದರು.
Tags
