ಹುಣಸೂರು : ಹುಣಸೂರು ಉಪ ವಿಭಾಗದ ಡಿವೈಎಸ್ಪಿ ರವಿಪ್ರಸಾದ್ ಪಿ.ರವರ 27ವರ್ಷದ ಸುಧೀರ್ಘ ಕಾರ್ಯ ನಿರ್ವಹಣಾ ಅವಧಿಯ ಅಮೋಘ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿಗಳ ಶ್ಲಾಘನೀಯ ಪದಕಕ್ಕೆ ಭಾಜನರಾಗಿದ್ದಾರೆ.
ರವಿಪ್ರಸಾದ್ರವರು 1999ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸಬ್ಇನ್ಸ್ಪೆಕ್ಟರ್ ಆಗಿ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2007ರಲ್ಲಿ ವೃತ್ತ ನಿರೀಕ್ಷಕ, 2015ರಲ್ಲಿ ಡಿವೈಎಸ್ಪಿಯಾಗಿ ಪದೋನ್ನತಿ ಹೊಂದಿದ ಇವರು ಬೆಂಗಳೂರಿನ ಸಿಐಡಿಯಲ್ಲಿ ನಂತರ 2019ರಲ್ಲಿ ಬಾಣಸವಾಡಿ ಉಪ ವಿಭಾಗದ ಎಸಿಪಿಯಾಗಿ, 2021ಜನವರಿಯಿಂದ ಹುಣಸೂರು ಉಪವಿಭಾಗದ ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು 2021ರಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ವೇಳೆ ಒಂದೇ ಕುಟುಂಬದ ಆರು ಮಂದಿಯನ್ನು ಬೆಂಕಿ ಹಚ್ಚಿ ಹತ್ಯೆಗೈದಿದ್ದ ಪ್ರಕರಣವನ್ನು ಭೇಧಿಸಿ, 9ಮಂದಿ ಆರೋಪಿಗಳಿಗೆ ಉಗ್ರ ಶಿಕ್ಷೆ ಕೊಡಿಸಿದ್ದು 2013ರಲ್ಲಿ ಹೊಸದುರ್ಗ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರೇಪ್ ಪ್ರಕರಣದಲ್ಲಿ ಆರೋಪಿಗೆ 22ವರ್ಷಗಳ ಸಜೆ ಕೊಡಿಸಿದ್ದು, 2016ರಲ್ಲಿ ಸಿಐಡಿಯಲ್ಲಿದ್ದ ವೇಳೆ ಯುನಿವರ್ಸಿಟಿ ಬೋರ್ಡ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ 17ಮಂದಿ ಆರೋಪಿಗಳನ್ನು ಬಂಧಿಸಿ 10ಲಕ್ಷ ನಗದನ್ನು ವಶಪಡಿಸಿಕೊಂಡಿದ್ದ ಪ್ರಕರಣ.
2017ರಲ್ಲಿ ಬೆಂಗಳೂರಿನ ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 31ವರ್ಷ ವೃದ್ದೆಯ ಅಪಹರಣ ಪ್ರಕರಣವನ್ನು ಭೇಧಿಸುವಲ್ಲಿ ತೋರಿರುವ ಜಾಣ್ಮೆ. 2020ರಲ್ಲಿ ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಆರೋಪಿಗಳ ಪತ್ತೆ ಹಾಗೂ ಗಲಭೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ಹಾಗೂ ಹುಣಸೂರಿನ ನಾಲ್ಕು ಕೊಲೆ ಪ್ರಕರಣ, ಎಂಟು ಅತ್ಯಾಚಾರ ಪ್ರಕರಣ, ಎರಡು ಎಸ್.ಸಿ, ಎಸ್.ಟಿ ದೌರ್ಜನ್ಯ ಪ್ರಕರಣ ಹಾಗೂ ಅಂತರ್ರಾಜ್ಯ ಕಳ್ಳತನ ಪ್ರಕರಣ ಭೇಧಿಸುವಲ್ಲಿ ತೋರಿದ ಅಸಾಧಾರಣ ಪ್ರತಿಭೆ ಹಾಗೂ ಕರ್ತವ್ಯನಿಷ್ಟೆ ಸಾರ್ವಜನಿಕರೊಂದಿಗಿನ ಉತ್ತಮ ಭಾಂದವ್ಯವನ್ನು ಪರಿಗಣಿಸಿ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
