ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ ಬ್ರಹ್ಮಕಲಶೋತ್ಸವ | "ಶ್ರೀ ದೇವಿ ಮಹಾತ್ಮೆ" ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ
January 08, 2022
0
ಮಂಜೇಶ್ವರ:- ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಫೆಬ್ರವರಿ ತಿಂಗಳ 17 ರಿಂದ ಮೊದಲ್ಗೊಂಡು 20 ರ ತನಕ ಜರಗಲಿರುವ ಬ್ರಹ್ಮ ಕಲಶೋತ್ಸವದಂಗವಾಗಿ 18 ರಂದು ರಾತ್ರಿ ಶ್ರೀ ಕಟೀಲ್ದಪ್ಪೆ ಭಕ್ತೆರ್ ಮಂಜೇಶ್ವರ ಇವರ ಸೇವಾರ್ಥ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ "ಶ್ರೀ ದೇವಿ ಮಹಾತ್ಮೆ" ಎಂಬ ಪುಣ್ಯ ಕಥಾಭಾಗದ ಯಕ್ಷಗಾನ ಬಯಲಾಟ ಜರಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಮುಂಜಾನೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ನ್ಯಾಯವಾದಿ ದಾಮೋದರ ಶೆಟ್ಟಿಯವರಿಗೆ ಕ್ಷೇತ್ರದ ಅನುವಂಶಿಕ ಅರ್ಚಕರಾದ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣರವರು ಆಮಂತ್ರಣ ಪತ್ರಿಕೆ ನೀಡುವ ಮೂಲಕ ಬಿಡುಗಡೆಗೊಳಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ವೇಳೆ ಶ್ರೀ ಕಟೀಲ್ದಪ್ಪೆ ಭಕ್ತೆರ್ ಮಂಜೇಶ್ವರದ ರತನ್ ಕುಮಾರ್ ಹೊಸಂಗಡಿ, ಪಧಾಧಿಕಾರಿಗಳಾದ ಕಾರ್ತಿಕ್ ಶೆಟ್ಟಿ ಮಜಿಬೈಲು, ದೀಪಕ್ ರಾಜ್ ಉಪ್ಪಳ, ಮಹೇಶ್ ಬೆಜ್ಜ, ಗುರುಕಿರಣ್ ಆಚಾರ್ಯ ಕಾಳಿಕಾಂಬ ಉಪಸ್ಥಿತರಿದ್ದರು.
Tags
