ತುಳುಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇರಳ ತುಳು ಅಕಾಡೆಮಿ ಮುಂದೆ ನಡೆಸುವ ಹೋರಾಟಗಳಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಜೈ ತುಳುನಾಡ್ ಸಂಘಟನೆ
January 04, 2022
0
ಕಾಸರಗೋಡು : ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸಲು ಕೇರಳ ತುಳು ಅಕಾಡೆಮಿ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದೆಂದು ಕೇರಳ ಅಕಾಡೆಮಿಯ ಅಧ್ಯಕ್ಷ ಉಮೇಶ್ ಸಾಲಿಯಾನ್ ರವರು ಮೊನ್ನೆ ಸಂಜೆ ತುಳು ಕೆಲೆಂಡರ್ ಬಿಡುಗಡೆ ವೇಳೆ ಹೇಳಿದ ಮಾತಿಗೆ "ಜೈ ತುಳುನಾಡ್ ಸಂಘಟನೆ" ಯ ಕಾಸರಗೋಡು ವಲಯದ ಅಧ್ಯಕ್ಷರಾದ ಶ್ರೀಯುತ ಹರಿಕಾಂತ ಕಾಸ್ರೋಡು, ಕಾರ್ಯದರ್ಶಿ ಕಾರ್ತಿಕ್ ಕೆ .ಎನ್ ಪೆರ್ಲ ಹಾಗೂ ಸಮಿತಿ ಸದಸ್ಯರು ತಮ್ಮ ಬೆಂಬಲವನ್ನು ಸೂಚಿಸಿರುತ್ತಾರೆ.ಗಡಿನಾಡಿನಲ್ಲಿ ತುಳುಭಾಷೆಯ ಉಳಿವಿಗಾಗಿ ಕಳೆದ ಹಲವು ವರ್ಷಗಳಿಂದ ಸಂಘಟನೆಯು ನಿರಂತರವಾಗಿ ಕಾರ್ಯಾಚರಿಸುತ್ತಿದೆ.ಇನ್ನು ಮುಂದೆ ಕೇರಳ ತುಳು ಅಕಾಡೆಮಿ ತುಳುವಿಗಾಗಿ, ತುಳುನಾಡಿಗಾಗಿ ನಡೆಸುವ ಎಲ್ಲಾ ಹೋರಾಟ ಹಾಗೂ ಕಾರ್ಯಕ್ರಮಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tags
