ಶ್ರೀ ಕಣ್ವತೀರ್ಥ ಕ್ಷೇತ್ರಕ್ಕೆ ಶ್ರೀ ರಾಮಾಂಜನೇಯ ಸೇವಾ ಸಮಿತಿಯ ವತಿಯಿಂದ ತುಳು ಲಿಪಿ ನಾಮ ಫಲಕ ಸ್ಥಾಪನೆ
March 01, 2022
0
ಮಂಜೇಶ್ವರ : ತುಳುನಾಡಿನ ದೇವಾಲಯ, ದೈವಸ್ಥಾನ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ತುಳು ಲಿಪಿ ನಾಮಫಲಕವನ್ನು ಅಳವಡಿಸುವ ಯೋಜನೆಯನ್ನು ಜೈ ತುಳುನಾಡು ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದೆ. ಇದರಂತೆ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀ ಕಣ್ವತೀರ್ಥ ಮಠದಲ್ಲಿ ತುಳು ಲಿಪಿ ನಾಮ ಫಲಕವನ್ನು ಅಳವಡಿಸಲು ಜೈ ತುಳುನಾಡು ಸಂಘಟನೆ ಕಾಸರಗೋಡು ಇದರ ಮುಖಾಂತರ ಮಾಡಿದ ಬಿನ್ನಹವನ್ನು ಮನ್ನಿಸಿ ಕ್ಷೇತ್ರದ ಶ್ರೀ ರಾಮಾಂಜನೇಯ ಸೇವಾ ಸಮಿತಿಯ ವತಿಯಿಂದ ಶ್ರೀ ಕ್ಷೇತ್ರದಲ್ಲಿ ತುಳು ಲಿಪಿ ನಾಮ ಫಲಕವನ್ನು ಅಳವಡಿಸಲಾಯಿತು. ಸಮಿತಿಯ ಅಧ್ಯಕ್ಷರಾದ ಮಧುಸೂದನ ಆಚಾರ್ಯ ಅವರು ನಾಮ ಫಲಕವನ್ನು ಅನಾವರಣಗೊಳಿಸಿದರು.ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಾಧವ ಕಜೆಕೋಡಿ, ಕ್ಷೇತ್ರದ ಅರ್ಚಕರಾದ ರಮೇಶ್ ಉಪಾಧ್ಯಾಯ, ಜಗದೀಶ ರಾಮನಗರ ಹಾಗೂ ಜೈ ತುಳುನಾಡ್ ಸಂಘಟನೆ ಕಾಸರಗೋಡು ಇದರ ಅಧ್ಯಕ್ಷರಾದ ಹರಿಕಾಂತ ಕಾಸರಗೋಡು, ಕಾರ್ಯದರ್ಶಿ ಕಾರ್ತಿಕ್, ಸದಸ್ಯೆ ಕುಶಲಾಕ್ಷಿ ಕಣ್ವತೀರ್ಥ ಉಪಸ್ಥಿತರಿದ್ದರು.
Tags
