ಮಂಜೇಶ್ವರ: ಸೇವಾ ಸಹಕಾರಿ ಬ್ಯಾಂಕ್ನಲ್ಲಿ 32 ವರ್ಷಗಳಿಂದ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತರಾದ ಶ್ರೀಮತಿ ಲತಾ ಕುಮಾರಿ ಕುಂಜತ್ತೂರು ಹಾಗೂ ಶ್ರೀ ಹರೀಶ್ಚಂದ್ರ ಬಾವುಟಮೂಲೆ ಇವರನ್ನ ಬ್ಯಾಂಕ್ ನ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಇಂದು ಅಪರಾಹ್ನ ಬ್ಯಾಂಕ್ ನ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಇವರನ್ನ ಬ್ಯಾಂಕ್ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ ವನ್ನು ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕ್ ನ ಅಧ್ಯಕ್ಷರಾದ ಬಿ.ವಿ ರಾಜನ್ ವಹಿಸಿದರು. ವೇದಿಕೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷರಾದ ಯೋಗೀಶ್ ಕುಂಜತ್ತೂರು, ಬ್ಯಾಂಕ್ ಕಾರ್ಯದರ್ಶಿ ರಾಜನ್ ನಾಯರ್, ಜತೆ ಕಾರ್ಯದರ್ಶಿ ಕೃಷ್ಣಪ್ಪ ಕಣ್ವತೀರ್ಥ, ಬ್ಯಾಂಕ್ ನಿರ್ದೇಶಕರಾದ ಯತೀಶ್ ಕಾಜೂರು, ಶ್ರೀಮತಿ ಸುರೇಖ, ಶ್ರೀಮತಿ ಯಮುನಾ ಕಣ್ವತೀರ್ಥ, ಚೀಪ್ ಅಕೌಂಟೆಂಟ್ ಸುಕುಮಾರ ಬೀ, ಉಪಸ್ಥಿತರಿದ್ದು, ಶುಭ ಹಾರೈಸಿದರು. ಬ್ಯಾಂಕಿನ ವಿವಿಧ ಬ್ರಾಂಚ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವೇಳೆ ನಿವೃತ್ತರಾದ ಹರೀಶ್ಚಂದ್ರರವರು ಸಿ.ಪಿ.ಐ ಪಕ್ಷಕ್ಕಾಗಿ 30,000 ಮೊತ್ತವನ್ನು ದೇಣಿಗೆಯಾಗಿ ನೀಡಿದರು.

