ಮಂಜೇಶ್ವರ : ರಿಧಂ ಕಲ್ಚರಲ್ ವಿಂಗ್ಸ್ ವತಿಯಿಂದ ಕಲೆಯನ್ನು ನಂಬಿ ಬದುಕುವ ಬಡಕಲಾವಿದರಿಗೆ ಸ್ನೇಹಸೌಹಾರ್ಧತೆಯ ಮೂಲಕ ವಿಷು ಮತ್ತು ರಂಝಾನ್ ಹಬ್ಬದ ಪ್ರಯುಕ್ತ ಕಿಟ್ ವಿತರಣೆ ಮಾಡಲಾಯಿತು
ಬಡಕುಟುಂಬಗಳನ್ನು ಗುರುತಿಸಿ ಮನೆಮನೆಗಳಿಗೆ ಕಿಟ್ ವಿತರಣೆ ಮಾಡಿ ,ಜನಸೇವಾ ಯೋಜನೆಯ ಮೂಲಕ ಸೌಹಾರ್ದತೆಯನ್ನು ಬೆಳೆಸಿತು ರಿಧಂ ತಂಡ.
ಈಗ ತಾನೇ ಕಾರ್ಯಕ್ರಮಗಳು ಪ್ರಾರಂಭವಾದರೂ ಅನಾರೋಗ್ಯದ ಪರ ಮನೆಯಲ್ಲಿಯೇ ಬಡತನದ ಬೇಗೆಯ ಮನಗಂಡು ಸ್ವಲ್ಪವಾದರೂ ಸಹಾಯ ಮಾಡಲು ಹೊರಟ ರಿಧಂ ಕಲ್ಚರಲ್ ವಿಂಗ್ಸ್ ಮಂಜೇಶ್ವರ.
ಸಂಗೀತ ದ ಮೂಲಕ ಜನಮಾನಸದ ಸಾಗರದಲ್ಲಿ ಪ್ರಜ್ವಲಿಸುತ್ತಿದ್ದರೂ ಕಲೆಯನ್ನು ಬೆಳಗಿಸಿದ ಬಡ ಜನರ ಕೂಗಿಗೆ ಸ್ಪಂದಿಸಿ ಹಬ್ಬದ ಸಂತೋಷವನ್ನು ಕಿಟ್ ವಿತರಣೆ ಮೂಲಕ ಸೌಹಾರ್ದತೆಯನ್ನು ಮೂಡಿಸುವ ಪ್ರಮುಖ ಉದ್ದೇಶವಾಗಿತ್ತು.ಮಂಜೇಶ್ವರದ ರಿಧಂ ತಂಡ,ಶ್ರೀಮಾನ್ ಸಿದ್ದೀಕ್ ಮಂಜೇಶ್ವರ,ಶಿವಶಂಕರ್ ಕಟ್ಟೇಬಝಾರ್,ನಿತಿನ್ ಕನಿಲ,ಪ್ರವೀಣ್ ಪ್ರತಾಪನಗರ,ದೀಕ್ಷಾ ಶೆಟ್ಟಿ,ಅಶ್ರಫ್ ಬಿ ಕೆ ,ಶಿವಕುಮಾರ್ ಕೆ,ಅನ್ವಿತಾ ನಿತಿನ್ ಕನಿಲ,ಕಾರ್ತಿಕ್ ಲಾಲ್ ಭಾಗ್ ,ಎನ್.ಕೆ.ಕುಲಾಲ್ ಬೇಕೂರು ಸಹಭಾಗಿತ್ವದಲ್ಲಿ,ಹಲವು ಸದಸ್ಯರು ಸೇರಿ ಈ ಸಾಮಾಜಿಕ ಸಹಾಯವನ್ನು ಮಾಡುವ ಯೋಚನೆಮತ್ತುಯೋಜನೆ ವಂದನಾರ್ಹವಾಗಿದೆ.
ಇನ್ನೂ ಹೆಚ್ಚಿನ ಸೇವೆಯಲ್ಲಿ ಜನರ ಹಾರೈಕೆಗಳಿರಲಿ ಎಂಬ ಆಶಯ .

