ಕಾಸರಗೋಡು : ಹನ್ನೊಂದು ದೇಶದಲ್ಲಿ ಪ್ರೀಮಿಯರ್ ಪ್ರದರ್ಶನಗೊಂಡು ಎಲ್ಲಾ ತುಳುವರ ಮನಗೆದ್ದ "ರಾಜ್ ಸೌಂಡ್ಸ್ ಅಂಡ್ ಲೈಟ್ಸ್" ಇಂದು ಹಲವಾರು ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡಿತು. ಕಾಸರಗೋಡಿನ ಕೃಷ್ಣ ಸಿನಿಮಂದಿರದಲ್ಲಿಯೂ ಕೂಡ ಬಿಡುಗಡೆಗೊಂಡಿತು.
ರಾಜ್ ಶೆಟ್ಟಿಯವರ "ಒಂದು ಮೊಟ್ಟೆಯ ಕಥೆ" ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾ ಎನ್ನುವ ಹೆಸರು ಮಾಡಿತ್ತು.ಈಗ ಅದೇ ಚಿತ್ರತಂಡ ತುಳು ಭಾಷೆಯಲ್ಲಿ ಮತ್ತೊಂದು ಸಾಹಸಕ್ಕೆ ಮುಂದಾಗಿದ್ದರೆ. ತುಳು ಚಿತ್ರರಂಗಕ್ಕೆ ವ್ಯಾಪಕ ಪ್ರಚಾರ ಸಿಗಬೇಕು ಮತ್ತು ತುಳು ಭಾಷೆಗೆ ಅಧಿಕೃತ ಮನ್ನಣೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕೃಪಾರ್ಶೀವಾದಿಂದ ಪ್ರಪಂಚದ ಹನ್ನೊಂದು ದೇಶಗಳಾದ ಯುಎಈ,ಸೌದಿ ಅರೇಬಿಯಾ, ಯುಎಸ್ಎ, ಬಹ್ರೇನ್, ಕುವೈಟ್, ಕತ್ತಾರ್, ಯುಕೆ, ನೈಜೀರಿಯಾ, ಇಸ್ರೇಲ್, ಒಮಾನ್, ಜಾಂಬೀಯಾ ದೇಶಗಳಲ್ಲಿ ಪ್ರೀಮಿಯರ್ ಪ್ರದರ್ಶನಗೊಂಡು ಜನಮನ್ನನೆ ಗಲಿಸಿದೆ.
ವಿದೇಶ ಹಾಗೂ ಭಾರತದ ನಗರಗಳಲ್ಲಿ ಪ್ರೀಮಿಯರ್ ಶೋ ನಡೆಯಲಿದ್ದು ಇಂದು (ಮೆ.20) ಅಧಿಕೃತವಾಗಿ ಎಲ್ಲ ಕಡೆಯೂ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಬಿಡುಗಡೆಯಾಗಿದೆ. ಮ್ಯಾಂಗೋ ಪಿಕಲ್ಸ್ ಬ್ಯಾನರಿನಡಿಯಲ್ಲಿ ಚಿತ್ರ ತಯಾರಾಗಿದ್ದು ತುಳುವರ ಮದುವೆ ಮತ್ತು ಮದರಂಗಿ ಕಾರ್ಯಕ್ರಮದ ಗಮ್ಮತೆ ಚಿತ್ರದ ಕಥಾವಸ್ತು. ಮದುವೆಯ ಮುನ್ನಾ ದಿನ ನಡೆಯುವ ಮದರಂಗಿ ಕಾರ್ಯಕ್ರಮದಲ್ಲಿ ಸೌಂಡ್ಸ್, ಲೈಟ್ಸ್, ಡಿಜೆ, ಕುಣಿತ ತುಳುವರಲ್ಲಿ ಕಾಮನ್ ಆಗಿದ್ದು ಅದನ್ನೆ ಎಳೆಯಾಗಿಟ್ಟುಕೊಂಡು ವಿಭಿನ್ನ ಹಾಸ್ಯದ ಮೂಲಕ ಚಿತ್ರ ಸಾಗಲಿದೆ. ಆನಂದ್ ಎನ್.ಕುಂಪಲ ನಿರ್ಮಾಣದಲ್ಲಿ ಯುವ ನಟ ರಾಹುಲ್ ಅಮೀನ್ ನಿರ್ದೇಶನ ಮಾಡಿದ್ದಾರೆ.
ನಾಯಕ ನಟನಾಗಿ ವಿನಿತ್ ಕುಮಾರ್ ,ನವೀನ್ ಡಿ.ಪಡಿಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸತೀಶ್ ಬಂದಲೆ, ಸಂದಿಪ್ ಶೆಟ್ಟಿ, ಉಮೇಶ್ ಮಿಜಾರ್,ರವಿ ರಾಮಕುಂಜ, ರೂಪಶ್ರೀ ವರ್ಕಾಡಿ,ಕರಿಷ್ಮ ಅಮಿನ್,ಯಶ್ ಶಿವಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತುಳು ಚಿತ್ರರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದೂವರೆ ಕೋಟಿ ರೂ. ವ್ಯಯಿಸಿ ಚಿತ್ರವನ್ನು ನಿರ್ಮಾನಿಸಿದ್ದಾರೆ ಎಂದು ಚಿತ್ರ ತಂಡ ತಿಳಿಸಿದ್ದರು.