ಬದಿಯಡ್ಕ : ಪಟ್ಟಾಜೆ ವಾರ್ಡ್ ಉಪಚುನಾವಣೆ ಪ್ರಯುಕ್ತ ಭಾರತೀಯ ಜನತಾ ಪಕ್ಷದ ಚುನಾವಣಾ ಕಛೇರಿಯನ್ನು ಪಟ್ಟಾಜೆ ಷಣ್ಮುಖ ನಗರದಲ್ಲಿ ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ಕುಂಞ್ಞಿಕಣ್ಣ ಗುರುಸ್ವಾಮಿ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸೆಲ್ ಕೋರ್ಡಿನೇಟರ್ ಅಶೋಕ್ ಕಲ್ನಾಡ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವೀಶ ತಂತ್ರಿ ಕುಂಟಾರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುಧಾಮ ಗೋಸಾಡ, ಮಂಡಲ ಪ್ರಧಾನ ಕಾರ್ಯದರ್ಶಿ ಸುನೀಲ್ ಪಿ ಆರ್, ಕಾಸರಗೋಡು ಮಂಡಲ ಅಧ್ಯಕ್ಷರಾದ ಹರೀಶ್ ನಾರಂಪಡಿ, ಅಭ್ಯರ್ಥಿ ಮಹೇಶ್ ವಳಕ್ಕುಂಜ, ಎಸ್ಟಿ ಮೋರ್ಛಾ ಜಿಲ್ಲಾ ಅಧ್ಯಕ್ಷರಾದ ಈಶ್ವರ ಮಾಸ್ಟರ್, ಬದಿಯಡ್ಕ ಪಂಚಾಯತ್ ಪೂರ್ವ ವಲಯ ಸಮಿತಿ ಅಧ್ಯಕ್ಷರಾದ ವಿಜಯ ಸಾಯಿ, ಪಶ್ಚಿಮ ವಲಯ ಸಮಿತಿ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಭಟ್, ಪಶ್ಚಿಮ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಮಾನ್ಯ, ಚುನಾವಣಾ ಸಮಿತಿ ಅಧ್ಯಕ್ಷರಾದ ವೆಂಕಪ್ಪ ನಾಯ್ಕ್, ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಜಯಂತಿ,ಪಂಚಾಯತ್ ಸದಸ್ಯರುಗಳಾದ ಶಂಕರ ಡಿ, ಬಾಲಕೃಷ್ಣ ಶೆಟ್ಟಿ, ಶ್ರೀಮತಿ ಸ್ವಪ್ನ, ಶ್ರೀಮತಿ ಸೌಮ್ಯ ಮಹೇಶ್, ಶ್ರೀಮತಿ ಅನಿತಾ ಮಾಜಿ ಪಂಚಾಯತ್ ಸದಸ್ಯರಾದ ಮಂಜುನಾಥ ಡಿ ಮಾನ್ಯ, ಹಿರಿಯ ಕಾರ್ಯಕರ್ತರಾದ ವೆಂಕಟ್ರಮಣ ಚುಕ್ಕಿನಡ್ಕ ಮುಂತಾದವರು ಉಪಸ್ಥಿತರಿದ್ದರು.




